ನವದೆಹಲಿ (ಡಿ.21): ನೋಟು ಅಮಾನ್ಯ ಕ್ರಮದ ಬಳಿಕ, ಬ್ಯಾಂಕಿಂಗ್ ನಿಯಮಗಳನ್ನು ಸತತವಾಗಿ ಬದಲಾಯಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮದ ವಿರುದ್ಧ ಬ್ಯಾಂಕ್ ಅಧಿಕಾರಿಗಳೇ ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೂ.5000 ಕ್ಕಿಂತ ಹೆಚ್ಚಿನ ನಗದನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಹೇರಿರುವ ನಿರ್ಬಂಧವು ಹಾಸ್ಯಾಸ್ಪದವಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ವಿಶ್ವಾಸ್ ಉಟಗಿ ಹೇಳಿದ್ದಾರೆ.
ನ.8ರಂದು ನೋಟು ಅಮಾನ್ಯ ಕ್ರಮವನ್ನು ಘೋಷಿಸುವಾಗ, ಪ್ರಧಾನಿ ಮೋದಿ ಡಿ.30ರವರೆಗೆ ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾವಣೆ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲವೆಂದಿದ್ದರು, ಅದರೆ ರಿಸರ್ವ್ ಬ್ಯಾಂಕ್ ತನ್ನ 59ನೇ ನೋಟಿಫಿಕೇಶನ್’ನಲ್ಲಿ ಅದನ್ನು ಹಾಸ್ಯಾಸ್ಪದ ರೀತಿಯಲ್ಲಿ ಹಿಂಪಡೆಯುತ್ತದೆ, ಎಂದು ಉಟಗಿ ಹೇಳಿದ್ದಾರೆ.
ಅಂತಹ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಆರ್’ಬಿಐ, ಬ್ಯಾಂಕ್ ಅಧಿಕಾರಿಗಳನ್ನು, ಆದಾಯ ತೆರಿಗೆ ಅಥವಾ ತನಿಖಾಧಿಕಾರಿಗಳ ಪಾತ್ರ ವಹಿಸುವ ಅನಿವಾರ್ಯತೆ ಸೃಷ್ಟಿಸುತ್ತಿದೆ ಎಂದು ಉಟಗಿ ಹೇಳಿದ್ದಾರೆ.
ನಾವು ಬ್ಯಾಂಕ್ ಅಧಿಕಾರಿಗಳು; ನಾವು ಹಣವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಕೆಲಸ ಮಾಡಬಹುದು, ಹಣದ ಮೂಲ ಯಾವುದೆಂಬುವುದನ್ನು ಖಚಿತ ಪಡಿಸಲು ನಮ್ಮಿಂದ ಸಾಧ್ಯವಿಲ್ಲ. ನೋಟುಗಳಲ್ಲಿ ಅದು ಕಪ್ಪುಹಣವೋ, ಬಿಳಿಹಣವೋ ಎಂದು ಬರೆದಿರುವುದಿಲ್ಲ, ಎಂದು ಉಟಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೂ.5000 ಕ್ಕಿಂತ ಹೆಚ್ಚಿನ ನಗದನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡುವುದಕ್ಕೆ ಹೇರಿದ್ದ ನಿರ್ಬಂಧವನ್ನು ರಿಸರ್ವ್ ಬ್ಯಾಂಕ್, ಇಂದು ಸಡಿಲಿಸಿದೆ.
ರಾಷ್ಟ್ರೀಯ
Comments are closed.