ಆಂಧ್ರಪ್ರದೇಶ(ಡಿ.21): ನಿಮ್ಮಲ್ಲಿ 25 ಪೈಸೆಯ ‘ಘೇಂಡಾ ಮೃಗ’ವಿರುವ ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗುವ ಸಾಧ್ಯತೆ ಇದೆ. ಕೇವಲ ‘ಘೇಂಡಾ ಮೃಗ’ವಿರುವ ಈ 25 ಪೈಸೆಯ ನಾಣ್ಯದ ಬೆಲೆ ಈಗ 3 ಲಕ್ಷವಾಗಿದೆ. ಅಚ್ಚರಿಯಾದರೂ ಇದು ಸತ್ಯ!. ಅದು ಹೇಗೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಆಂಧ್ರ ಪ್ರದೇಶದಲ್ಲಿ ನಾಣ್ಯದ ಅಂಗಡಿಯನ್ನಿಟ್ಟುಕೊಂಡಿದ್ದ ಓರ್ವ ವ್ಯಕ್ತಿ ಇಂತಹ ಕೆಲವು ನಾಣ್ಯಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿದ್ದ 1 ರೂಪಾಯಿ, ಪೈಸೆ ಹಾಗೂ ‘ಘೇಂಡಾ ಮೃಗ’ವಿದ್ದ 25 ಪೈಸೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಮಾರಿದ್ದಾನೆ. ನಿಮ್ಮಲ್ಲೂ ಇಂತಹ ನಾಣ್ಯಗಳಿದ್ದರೆ ನೀವೂ ಇದನ್ನು ಆನ್’ಲೈನ್’ನಲ್ಲಿ ಮಾರಬಹುದಾಗಿದೆ.
ಸದ್ಯ 3 ಲಕ್ಷ ಪಡೆದಿರುವ ವೃದ್ಧ ಈ ಕುರಿತಾಗಿ ಮಾತನಾಡಿದ ಶ್ರೀಭಗ್’ವಾನ್ ’25 ಪೈಸೆ ಚಲಾವಣೆಯಲ್ಲಿದ್ದದ್ದು ಇದೀಗ ಇತಿಹಾಸ. ಈ ನಾಣ್ಯ ಕೇವಲ ಒಂದು ಇತಿಹಾಸವಲ್ಲ ಬದಲಾಗಿ ಸಮಯ ಕಳೆದಂತೆ ಆದ ಹಲವಾರು ರೀತಿಯ ಬದಲಾವಣೆಗಳ ಸಾಕ್ಷಿಯೂ ಆಗಿತ್ತು. 5 ನೇ ಜಾರ್ಜ್ ಈ ನಾಣ್ಯವನ್ನು ಪರಿಚಯಿಸಿದ್ದರು. ಆದರೆ ಮೊದಲು ಇದು ಅಷ್ಟಭುಜಗಳನ್ನು ಹೊಂದಿತ್ತು. ಇದು ಇತಿಹಾಸದಲ್ಲೇ ವೃತ್ತಾಕಾರ ಹೊಂದಿರದ ಮೊದಲ ನಾಣ್ಯವಾಗಿತ್ತು.
1835ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಮಷೀನ್’ಗಳಿಂದ 25 ಪೈಸೆಯ ಬೆಳ್ಳಿಯ ನಾಣ್ಯಗಳನ್ನು ಮುದ್ರಿಸಲು ಆರಂಭಿಸಿತು. 1940ರವರೆಗೆ ಬಂದ ನಾಣ್ಯಗಳು ಸಂಪೂರ್ಣವಾಗಿ ಬೆಳ್ಳಿಯದಾಗಿತ್ತ. ಆದರೆ ತದ ನಂತರ ಬಂದ ನಾಣ್ಯಗಳು ಕಳಪೆ ಮಟ್ಟದ್ದಾಗಿತ್ತಲ್ಲದೆ ಸಂಪೂರ್ಣವಾಗಿ ಬೆಳ್ಳಿಯದ್ದಾಗಿರಲಿಲ್ಲ’ ಎಂದಿದ್ದಾರೆ.
ಅದೇನಿದ್ದರೂ 25 ಪೈಸೆ ನಾಣ್ಯದಿಂದ 67ರ ವೃದ್ಧ ಲಕ್ಷಾಧಿಪತಿಯಾಗಿರುವುದು ಅಚ್ಚರಿಯೇ ಸರಿ.
ರಾಷ್ಟ್ರೀಯ
Comments are closed.