ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟು ನಿಷೇಧಿಸಿದ ನಂತರ 48 ಗ್ರಾಹಕರು ತನಗೆ ವಂಚಿಸಿರುವುದಾಗಿ ಭಾರತದ ಅತಿದೊಡ್ಡ ಇ-ಪೇಮೆಂಟ್ ಕಂಪನಿ ಪೇಟಿಎಂ ಈ ಹಿಂದೆ ಆರೋಪಿಸಿತ್ತು, ಈಗ ಮತ್ತೆ ಏಳು ಗ್ರಾಹಕರು ವಂಚಿಸಿರುವುದಾಗಿ ಆರೋಪಿಸಿದ್ದು, ಸಿಬಿಐ ಈ ಸಂಬಂಧ ಏಳು ಮಂದಿ ವಿರುದ್ಧ ಹೊಸ ಎಫ್ ಐಆರ್ ದಾಖಲಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಏಳು ಮಂದಿ ಒಟ್ಟು 37 ಆರ್ಡರ್ ಗಳ ಮೂಲಕ 3.21 ಲಕ್ಷ ರುಪಾಯಿ ವಂಚಿಸಿರುವುದಾಗಿ ಪೇಟಿಎಂ ದೂರು ನೀಡಿದ್ದು, ಕಂಪನಿ ನೀಡಿದ ಏಳು ಆರೋಪಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಸರ್ಕಾರ ಡಿಜಿಟಲ್ ಪೇಮೆಂಟ್ ಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಪೇಟಿಎಂಗೆ ಭರ್ಜರಿ ಲಾಭವಾಗುತ್ತಿದೆ. ಆದರೆ ಈಗ ಪೇಟಿಎಂಗೇ ಗ್ರಾಹಕರು ಮೋಸ ಮಾಡುತ್ತಿದ್ದಾರೆ. ಈ ಹಿಂದೆ 48 ಗ್ರಾಹಕರಿಂದ 6.15 ಲಕ್ಷ ರುಪಾಯಿ ವಂಚನೆ ನಡೆದಿದೆ ಎಂದು ಆರೋಪಿಸಿ ಪೇಟಿಎಂ ದೂರು ನೀಡಿತ್ತು. ಈಗ ಮತ್ತೊಂದು ದೂರು ನೀಡಿದ್ದು, ಸಿಬಿಐ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ.
ರಾಷ್ಟ್ರೀಯ
Comments are closed.