ರಾಷ್ಟ್ರೀಯ

ಡಿ. 30ರ ನಂತರ ಎಟಿಎಂ ವಿತ್ ಡ್ರಾ ಮಿತಿ ಸಡಿಲಿಕೆ

Pinterest LinkedIn Tumblr

atm
ನವದೆಹಲಿ: ಜನತೆಗೆ ಅಗತ್ಯವಾದಷ್ಟು ನಗದು ಇದ್ದು, ಡಿಸೆಂಬರ್ 30 ರ ಬಳಿಕ ಎಟಿಎಂ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಲಾಗಾತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಸಂತೋಷ್ ಗಂಗ್ವರ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಸಂತೋಷ್ ಗಂಗ್ವರ್ ಅವರು, ಡಿಸೆಂಬರ್ 30 ರ ಬಳಿಕ ಎಟಿಎಂಗಳಲ್ಲಿನ ವಿಚ್ ಡ್ರಾ ಮೇಲೆ ಹೇರಲಾಗಿರುವ ಮಿತಿಯನ್ನು ಸಡಿಲಿಸಲಾಗುತ್ತದೆ. ನಾನು ಕೂಡ ವಿತ್ ಮಿತಿ ಸಡಿಲಿಕೆ ಪರವಾಗಿದ್ದೇನೆ. ಆದರೆ ಪ್ರಸ್ತುತ ಪರಿಸ್ಥಿತಿಗಳು ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಬಹುಶಃ ಡಿಸೆಂಬರ್ 30ರಬಳಿಕ ಪರಿಸ್ಥಿತಿ ಸುಧಾರಣೆಯಾಗುವ ವಿಶ್ವಾಸವಿದ್ದು, ಆದ ಎಟಿಎಂಗಳಲ್ಲಿನ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಬಹುದು. ಎಟಿಎಂಗಳಲ್ಲಿನ ವಿತ್ ಡ್ರಾ ಮಿತಿ ಸಡಿಲಗೊಳಿಸುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಎಟಿಎಂಗಳಲ್ಲಿ ದಿನವೊಂದಕ್ಕೆ ಗರಿಷ್ಠ 2500 ರು. ಮತ್ತು ವಾರಕ್ಕೆ 24 ಸಾವಿರ ರು.ಗಳ ವಿತ್ ಡ್ರಾ ಮಿತಿ ಇದೆ. ಆದರೆ ನಗದು ರಹಿತ ಬ್ಯಾಂಕಿಂಗ್ ಅಂದರೆ ಚೆಕ್, ಡಿಡಿ, ಮೊಬೈಲ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಮೇಲೆ ಯಾವುದೇ ಮಿತಿ ಹೇರಲಾಗಿಲ್ಲ.
ಈ ಹಿಂದೆ ಇಂತಹುದೇ ಅಭಿಪ್ರಾಯವನ್ನು ವಿತ್ತ ಕಾರ್ಯದರ್ಶಿ ಅಶೋಕ್ ಲಾವಾಸ್ ಅವರು ಕೂಡ ವ್ಯಕ್ತಪಡಿಸಿದ್ದರು. ಡಿಸೆಂಬರ್ 30ರ ಬಳಿಕ ವಿತ್ ಡ್ರಾಮಿತಿ ಸಡಿಲವಾಗಬಹುದು ಎಂದು ಹೇಳಿದ್ದರು.

Comments are closed.