ರಾಷ್ಟ್ರೀಯ

ದ್ವಿತೆರಿಗೆ ತಪ್ಪಿಸಲು ಒಪ್ಪಂದದ ತಿದ್ದುಪಡಿ ಮಾಡಲಿರುವ ಭಾರತ-ಖಜಕಿಸ್ತಾನ

Pinterest LinkedIn Tumblr


ನವದೆಹಲಿ: ದ್ವಿತೆರಿಗೆ (ಎರಡೂ ಕಡೆ ತೆರಿಗೆ ಪಾವತಿ)ಯನ್ನು ತಪ್ಪಿಸಲು ಭಾರತ-ಖಜಕಿಸ್ತಾನ ಒಡಂಬಡಿಕೆಯ ತಿದ್ದುಪಡಿ ಮಾಡಲು ನಿರ್ಧರಿಸಿವೆ.
ಭಾರತ-ಖಜಕಿಸ್ತಾನ, (ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಕನ್ವೆನ್ಷನ್-ಡಿಟಿಎಸಿ) ಗೆ ತಿದ್ದುಪಡಿ ತರುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಒಪ್ಪಂದದ ತಿದ್ದುಪಡಿಯಿಂದ ತೆರಿಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಪರಸ್ಪರ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಭಾರತ-ಖಜಕಿಸ್ತಾನ 1996ರ ಡಿ.9 ರಂದು ಡಿಟಿಎಸಿಗೆ ಸಹಿ ಹಾಕಿದ್ದವು.

Comments are closed.