ರಾಷ್ಟ್ರೀಯ

ರಸ್ತೆಯಲ್ಲಿ ಓಡಾಡುವ ಹುಡುಗಿಯರಿಗೆ ಮುತ್ತಿಟ್ಟು ತಮಾಷೆ!

Pinterest LinkedIn Tumblr


ನವದೆಹಲಿ: ‘ಇದು ಭಾರತದ 2017ರ ಅತಿ ಮಜಾ ನೀಡುವ ತಮಾಷೆ’ ಎಂಬ ಬರಹದೊಂದಿಗೆ ಮಹಿಳೆಯರಿಗೆ ಮುತ್ತಿಟ್ಟು ತಪ್ಪಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಕ್ರೇಜಿ ಸುಮಿತ್‌ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.

ಹೊಸ ವರ್ಷದ ಸಂಭ್ರಮದ ದಿನದಂದು ಬೆಂಗಳೂರಿನಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿದ್ದ ಸಮಯದಲ್ಲಿ ಕ್ರೇಜಿ ಸುಮಿತ್‌ ಮಾಡಿರುವ ತಮಾಷೆ ವಿಡಿಯೋಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಯೂಟ್ಯೂಬ್‌ನಲ್ಲಿ ಪ್ರಕಟಿಸಿದ್ದ ವಿಡಿಯೋ ವಿರುದ್ಧ ಹೆಚ್ಚು ಸಂದೇಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ತಪ್ಪನ್ನು ತಿಳಿದುಕೊಂಡ ಕ್ರೇಜಿ ಸುಮಿತ್‌, ವಿಡಿಯೋ ತೆಗೆದು ಹಾಕಿದ್ದಾನೆ.

ಕೆಲವು ಮಾಧ್ಯಮಗಳಲ್ಲಿಯೂ ಈ ವಿಷಯ ಚರ್ಚೆಗೆ ಬರುತ್ತಿದ್ದಂತೆ ಫೇಸ್‌ಬುಕ್‌ ಮೂಲಕ ಸುಮಿತ್‌ ಕ್ಷಮೆಯಾಚಿಸಿದ್ದಾನೆ.

ರಸ್ತೆಯಲ್ಲಿ ಸಿಗುವ ಮಹಿಳೆಯ ಬಳಿ ಮಾತನಾಡಿಸುವಂತೆ ಹೋಗಿ ಮುಟ್ಟಿಟ್ಟು ಓಡುತ್ತ ತಪ್ಪಿಸಿಕೊಳ್ಳುತ್ತಿದ್ದ. ಇದನ್ನು ಚಿತ್ರೀಕರಿಸಿ ‘ತಮಾಷೆ’ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೇಜಿ ಸುಮಿತ್‌ ಹೆಸರಿನಲ್ಲಿ ಪ್ರಕಟಿಸಿದ್ದ.

ಈ ವಿಡಿಯೋ ಪ್ರಕರಣದ ಸಂಬಂಧ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Comments are closed.