ರಾಷ್ಟ್ರೀಯ

16 ರೂಪಾಯಿಗೆ ಅನ್`ಲಿಮಿಟೇಡ್ 3ಜಿ/4ಜಿ ಡೇಟಾ

Pinterest LinkedIn Tumblr


ನವದೆಹಲಿ(ಜ.08): ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಎಂಟ್ರಿ ಕೊಟ್ಟ ಬಳಿಕ ಅಕ್ಷರಶಃ ಬೆಲೆ ಸಮರ ಶುರುವಾಗಿದೆ. ಜಿಯೋ ಫ್ರೀ ಆಫರ್ ಬಳಿಕ ಕಂಗೆಟ್ಟಿರುವ ಇತರೆ ಸಂಸ್ಥೆಗಳು ಆಫರ್`ಗಳ ಮೇಲೆ ಆಫರ್ ನೀಡುತ್ತಿವೆ. ಇದೀಗ, ವೊಡಾಫೋನ್ ಸರದಿ.

ವೊಡಾಫೋನ್ ಕೇವಲ 16 ರೂಪಾಯಿಯಲ್ಲಿ ಅನಿಯಮಿತ 3ಜಿ ಮತ್ತು 4ಜಿ ಡೇಟಾ ಆಫರ್ ನೀಡುತ್ತಿದೆ. ಅದು ಕೇವಲ ಒಂದು ಗಂಟೆ ಮಾತ್ರ. 16 ರೂಪಾಯಿಯಲ್ಲಿ ಒಂದು ಗಂಟೆ ಎಷ್ಟು ಬೇಕಾದರೂ 3ಜಿ/4ಜಿ ಡೇಟಾ ಬಳಸಬಹುದಾಗಿದೆ.ಇದಕ್ಕೆ ಸೂಪರ್ ಅವರ್ ಎಂದು ಹೆಸರಿಡಲಾಗಿದ್ದು, ದಿನಕ್ಕೆ ಎಷ್ಟು ಬಾರಿಯಾದರೂ ಸೂಪರ್ ಅವರ್ ಆಕ್ಟಿವ್ ಮಾಡಿಕೊಂಡು ಡೌನ್ ಲೋಡ್ ಸೇರಿದಂತೆ ಯಾವುದೇ ರೀತಿಯಲ್ಲಿ ನಿಮಗೆ ಇಷ್ಟಬಂದಷ್ಟು ಡೇಟಾ ಬಳಸಬಹುದು.

ಇದರ ಜೊತೆಗೆ ಕೇವಲ 7 ರೂಪಾಯಿಯಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್`ಲಿಮಿಟೇಡ್ ವಾಯ್ಸ್ ಕಾಲ್ ಆಫರನ್ನ ವೊಡಾಫೋನ್ ನೀಡಿದೆ. ಪ್ರೀಪೇಯ್ಡ್ ಗ್ರಾಹಕರು ಇದರ ಅನುಕೂಲತೆ ಪಡೆಯಬಹುದಾಗಿದ್ದು, ಇದೇ ಲಾಂಚ್ ಆಗಿದೆ. ಜನವರಿ9ಕ್ಕೆ ಗ್ರಾಹಕರಿಗೆ ಸಿಗಲಿದೆ.

Comments are closed.