ರಾಷ್ಟ್ರೀಯ

‘ಪದ್ಮಾವತಿ’ ಹಿಂದೂ ಆಗಿದ್ದ ಕಾರಣ ಆಕೆಯನ್ನು ಕೆಟ್ಟದಾಗಿ ಚಿತ್ರಣ: ಗಿರಿರಾಜ್ ಸಿಂಗ್ ಆಕ್ರೋಶ

Pinterest LinkedIn Tumblr


ಜೈಪುರ್: ಸದಾ ವಿವಾದಿತ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದೀಗ ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಚಿತ್ರ ‘ಪದ್ಮಾವತಿ’ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಖಾದಿ ಗ್ರಾಮೋದ್ಯೋಗ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್, ಭಾರತದ ಇತಿಹಾಸವನ್ನು ತಿರುಚುವವರನ್ನು ಜನರು ಶಿಕ್ಷೆಗೊಳಪಡಿಸಬೇಕೆಂದು ಹೇಳಿದ್ದಾರೆ.

ದೇಶದಲ್ಲಿ ಔರಂಗಜೇಬ್, ಟಿಪ್ಪು ಸುಲ್ತಾನ್ ಮೊದಲಾದವರನ್ನು ‘ಐಕಾನ್’ಗಳನ್ನಾಗಿ ಮಾಡುತ್ತಿರುವುದು ಖೇದಕರ. ದೇಶದ ಇತಿಹಾಸವನ್ನು ತಿರುಚಿ, ಪದ್ಮಾವತಿಯ ಪಾತ್ರವನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗಿದೆ. ಆಕೆ (ಪದ್ಮಾವತಿ) ಹಿಂದೂ ಅಲ್ಲದೇ ಇರುತ್ತಿದ್ದರೆ, ಆಕೆಯನ್ನು ಆ ರೀತಿ ಬಿಂಬಿಸಲು ಯಾರೊಬ್ಬರೂ ಧೈರ್ಯ ತೋರುತ್ತಿರಲಿಲ್ಲ ಎಂದು ಗಿರಿರಾಜ್ ಸಿಂಗ್ ಕಿಡಿಕಾರಿದ್ದಾರೆ.

ಹೀಗೆ ಯಾರಾದರೂ ಮಾಡಿದ್ದೇ ಆದರೆ ಅವರು ಭಾರತದ ಇತಿಹಾಸವನ್ನು ತಿರುಚಿದ್ದಾರೆ. ಭಾರತದ ಮಾನ ಮರ್ಯಾದೆ ಜತೆ ಆಟವಾಡಿದ್ದಾರೆ. ಪದ್ಮಾವತಿ ತನ್ನನ್ನು ತಾನೇ ತ್ಯಾಗ ಮಾಡಿಕೊಂಡಿದ್ದಳೇ ಹೊರತು ಯಾವತ್ತೂ ಮೊಘಲರ ಮುಂದೆ ಮಂಡಿಯೂರಲಿಲ್ಲ, ಹೀಗಿರುವಾಗ ಇತಿಹಾಸ ತಿರುಚಿದವರಿಗೆ ಜನರು ಶಿಕ್ಷೆ ನೀಡಲೇಬೇಕು.

ಹಿಂದೂ ದೇವಿ-ದೇವರನ್ನು ಪ್ರಶ್ನಿಸಿದ ಹಲವಾರು ಸಿನಿಮಾಗಳು ಬಂದಿವೆ. ಆದರೆ ಮಹಮ್ಮದ್ ಸಾಹಬ್‍ನ್ನು ಪ್ರಶ್ನಿ ಯಾರೊಬ್ಬರೂ ಸಿನಿಮಾ ಮಾಡಿದ್ದಾರಾ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.

Comments are closed.