ರಾಷ್ಟ್ರೀಯ

ಜಲ್ಲಿಕಟ್ಟು ಪರ ಪ್ರತಿಭಟನೆ: ಸುಪ್ರಿಂ ಛೀಮಾರಿ

Pinterest LinkedIn Tumblr


ನವದೆಹಲಿ(ಜ.31): ಚೆನ್ನೈನ ಮರೀನಾ ಬೀಚ್’ನಲ್ಲಿ ಜಲ್ಲಿಕಟ್ಟು ಪರವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ಸರ್ಕಾರದ ಆದ್ಯ ಕರ್ತವ್ಯ. 2 ವರ್ಷಗಳ ಹಿಂದೆಯೇ ಜಲ್ಲಿಕಟ್ಟಿಗೆ ತಡೆ ನೀಡಿದ್ದೇವೆ. ಈಗೇಕೆ ಪ್ರತಿಭಟನೆ ನಡೆಸುತ್ತಿದ್ದೀರಾ ? ಎಂದು ಕೋರ್ಟ್ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ. ಯಾವುದೇ ಅಹಿತಕರ ಪ್ರತಿಭಟನೆ ನಡೆದಾಗ ಕಾನೂನಿನ ಮೂಲಕ ನಿಯಂತ್ರಿಸಬೇಕಾಗುತ್ತದೆ.ಈ ರೀತಿಯ ಘಟನೆಗಳು ಆಗಲೇಬಾರದು. ಪ್ರತಿಭಟನೆಗಳನ್ನು ನಿಯಂತ್ರಿಸುವುದು ನಿಮ್ಮ ಕರ್ತವ್ಯ ಕೂಡ’ ಎಂದು ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ನಡೆಯುತ್ತಿರುವ ಕಾರಣದಿಂದ ಸುಪ್ರೀಂ ಕೋರ್ಟ್ 2014ರಲ್ಲಿಯೇ ಜಲ್ಲಿಕಟ್ಟನ್ನು ನಿಷೇಧಿಸಿತ್ತು. ತದ ನಂತರ ಈ ವರ್ಷದ ಆರಂಭದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಯಾದ ಕಾರಣದಿಂದ ಕೇಂದ್ರ ಸರ್ಕಾರ ನಿಷೇಧವನ್ನು ತಡೆಯಿಡಿದಿತ್ತು. ರಾಜ್ಯ ಸರ್ಕಾರ ಕೂಡ ವಿಶೇಷ ಅಧಿವೇಶನದ ಮೂಲಕ ಜಲ್ಲಿಕಟ್ಟು ವಿಧೇಯಕವನ್ನು ಅಂಗೀಕರಿಸಿತ್ತು.

Comments are closed.