ರಾಷ್ಟ್ರೀಯ

ಕಳುವಾಗಿದ್ದ ಸತ್ಯಾರ್ಥಿ ನೊಬೆಲ್ ಪಾರಿತೋಷಕ ಪತ್ತೆ

Pinterest LinkedIn Tumblr


ನವದೆಹಲಿ(ಫೆ.12): ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರ ಕಳುವಾದ ನೊಬೆಲ್ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರವನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೂವರು ಕಳ್ಳರು ಸತ್ಯಾರ್ಥಿ ಅವರು ವಾಸವಿದ್ದ ಅರವಲ್ಲಿ ಅಪಾರ್ಟ್’ಮೆಂಟ್’ನ ಕೈಲಾಶ್ ಅವರ ಫ್ಲಾಟ್ ಒಳಗೊಂಡು ಮೂರು ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು. ಮೂವರನ್ನು ಬಂಧಿಸಿರುವ ಪೊಲೀಸರು ನೊಬೆಲ್ ಪದಕ ಹಾಗೂ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

Comments are closed.