ರಾಷ್ಟ್ರೀಯ

ಯಾರೇ ತಪ್ಪು ಮಾಡಿದರೂ ಅವರಿಗೆ ಸೋಲೇ ಗತಿ: ಕಮಲ್ ಹಾಸನ್ ಟ್ವೀಟ್

Pinterest LinkedIn Tumblr

ಚೆನ್ನೈ,: ಯಾರೇ ತಪ್ಪು ಮಾಡಿದರೂ ಅವರಿಗೆ ಸೋಲೇ ಗತಿಯಾಗುತ್ತದೆ ಎಂದು ಖ್ಯಾತ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಎಐಎಡಿಎಂಕೆ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಸುಪ್ರೀಂಕೋರ್ಟ್ ಅಪರಾಧಿ ಎಂದು ಘೋಷಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ದಂಡ ವಿಧಿಸಿದೆ.

ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ ಕಮಲ್ ಹಾಸನ್ ತಪ್ಪು ಮಾಡಿದವರಿಗೆ ಸೋಲೇ ಗತಿ ಎನ್ನುವ ಸಂದೇಶ ಪೋಸ್ಟ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಶಶಿಕಲಾ ಬಣ ಮತ್ತು ಪನ್ನೀರ್ ಸೆಲ್ವಂ ಬಣದ ಮಧ್ಯದ ತಿಕ್ಕಾಟ ತೀವ್ರಗೊಂಡಿದೆ.

Comments are closed.