ಹೊಸದಿಲ್ಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಯಾವಾಗ ಮದುವೆಯಾಗುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇದೀಗ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಉತ್ತರಿಸಿದ್ದು ಹೀಗೆ……
ಮೊದಲನೆಯದಾಗಿ ‘ನೀವು ದೇಶದ ಪ್ರಧಾನಿಯಾದರೆ, ಕ್ರೀಡಾ ಕ್ಷೇತ್ರದ ಅಭಿವೃದ್ದಿಗೆ ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಕೇಳಿದರೆ, ಎರಡನೇಯದ್ದಾಗಿ ‘ರಾಹಲ್ ಅಣ್ಣಾ ಅವರೇ ನೀವು ಯಾವಾಗ ಮದುವೆಯಾಗುತ್ತೀರಿ’ ಎಂದು ವಿಜೇಂದರ್ ಸಿಂಗ್ ಪ್ರಶ್ನಿಸಿದರು.
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿರುವ ರಾಹುಲ್, ಇದು ತೀರ ಹಳೆಯ ಪ್ರಶ್ನೆ ಎಂದು ಸಿಂಗ್ ಅವರ ಬಾಯಿ ಮುಚ್ಚಿಸಲು ಯತ್ನಿಸಿದರು. ಆದರೂ ಸುಮ್ಮನಾಗದ ಸಿಂಗ್, ‘ನಿಮ್ಮ ವಿವಾಹಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ನೀವು ಪ್ರಧಾನಿಯಾದ ಬಳಿಕ ವಿವಾಹವಾಗುತ್ತೀರಾ? ಎಂದೇ ಪ್ರಶ್ನಿಸಿದರು.
ಬಳಿಕ ಸಿಂಗ್ ಪ್ರಶ್ನೆಗೆ ಅನಿವಾರ್ಯವಾಗಿ ಉತ್ತರಿಸಿದ ರಾಹುಲ್, ‘ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ವಿವಾಹ ಯಾವಾಗ ಆಗಬೇಕೆಂದು ಬರೆದಿದೆಯೋ, ಅಂದೇ ಆಗುತ್ತೆ’ ಎಂದಿದ್ದಾರೆ.
"ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ವಿವಾಹ ಯಾವಾಗ ಆಗಬೇಕೆಂದು ಬರೆದಿದೆಯೋ, ಅಂದೇ ಆಗುತ್ತೆ” PM ಆಗೋಕು ವಿದಿಯ ಮೇಲೆ ನಂಬಿಕೆ ಇಡಿ ಸುಮ್ನೆ ಯಾಕೆ ಈ ಪ್ರಚಾರ ಎಲ್ಲ.
ಗುರುವಾರ ದಿಲ್ಲಿಯಲ್ಲಿ ನಡೆದ 112ನೇ ವಾರ್ಷಿಕ ಅಧಿವೇಶನ ಹಾಗೂ ಪಿಎಚ್‌ಡಿ ಗೌರವ ಪ್ರದಾನ ಸಮಾರಂಭದಲ್ಲಿ ರಾಹುಲ್ ಈ ಪ್ರಶ್ನೆಗಳನ್ನು ಕೇಳುವ ಅವಕಾಶ ಸಿಂಗ್ ಅವರಿಗೆ ಸಿಕ್ಕಿತ್ತು.
Comments are closed.