ರಾಷ್ಟ್ರೀಯ

ಐಸಿಸ್‌ ಉಗ್ರರಿಗೆ ಸಖಿಯಾಗಿದ್ದಳೇ ಈ ಗಗನಸಖಿ?

Pinterest LinkedIn Tumblr


ಹೊಸದಿಲ್ಲಿ: ಕೆಲ ದಿನಗಳ ಹಿಂದೆ ದೇಶದಲ್ಲಿ ಬೀಡು ಬಿಟ್ಟಿದ್ದ ಇಬ್ಬರು ಇಸ್ಲಾಮಿಕ್‌ ಸ್ಟೇಟ್‌ ಉಗ್ರರನ್ನು ಗುಜರಾತ್‌ ಭಯೋತ್ಪಾದನಾ ವಿರೋಧಿ ತಂಡ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಆಘಾತಕಾರಿ ವಿಚಾರವೊಂದು ಬಯಲಾಗಿದ್ದು, ಇಬ್ಬರು ಉಗ್ರರು ಪ್ರತಿಷ್ಠಿತ ವಿಮಾನವೊಂದರ ಗಗನಸಖಿಯೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ.

ಬುಧವಾರದಂದು ಸೂರತ್‌ನ ಆಂಕ್ಲೇಶ್ವರ್‌ ಬಳಿಕ ಉಗ್ರ ನಿಗ್ರಹ ತಂಡ ವಕೀಲ ಉಬೈದ್‌ ಮಿಜ್ರಾ ಮತ್ತು ಅಂಕೆಲೇಶ್ವರ್‌ನ ಖಾಸಗಿ ಆಸ್ಪತ್ರೆಯಲ್ಲಿ ಎಕೋಕಾರ್ಡಿಯೋಗ್ರಾಮ್ ಪ್ರಯೋಗಾಲಯದ ತಂತ್ರಜ್ಞನಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಸಿಂ ಸ್ತಿಂಬೇರ್ವಾಲನನ್ನು ಬಂಧಿಸಲಾಗಿತ್ತು. ಇಬ್ಬರ ವಿಚಾರಣೆ ವೇಳೆ ಗಗನಸಖಿ ಉಬೈದ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ.

ಎಟಿಎಸ್‌ ಮೂಲಗಳ ಪ್ರಕಾರ ಬಂಧಿತ ಉಗ್ರರಿಬ್ಬರು ಗಗನಸಖಿಯ ಮೂಲಕ ವಿದೇಶದಿಂದ ಅಕ್ರಮವಾಗಿ ಚಿನ್ನದ ಗಟ್ಟಿಯನ್ನು ಸಾಗಿಸಲು ಸಹಾಯ ಪಡೆಯುವ ಯೋಜನೆ ಹೊಂದಿದ್ದರು ಎನ್ನಲಾಗಿದೆ. ಉಬೈದ್‌ ಮತ್ತು ತಮಿಳುನಾಡು ಮೂಲದ ತೀವ್ರಗಾಮಿ ಜಬೈಉಲ್ಲಾನೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಇಬ್ಬರ ಫೋನ್‌ ಟ್ರಾಪ್‌ ಮಾಡಿದ ವೇಳೆ ಇಬ್ಬರೂ ಚಿನ್ನ, ಸಿಗರೇಟ್ ಮತ್ತು ಉಪಯೋಗಿಸಿದ ಕಾರುಗಳ ಕಳ್ಳಸಾಗಣೆ ಯೋಜನೆ ಹೂಡಿದ್ದರು ಎನ್ನಲಾಗಿದೆ.

ಸಂಭಾಷಣೆಯಲ್ಲಿ ಉಬೈದ್‌ ಚಿನ್ನದ ಸಾಗಾಣೆಯನ್ನು ಗಗನ ಸಖಿಯೊಬ್ಬಳ ಮೂಲಕ ಮಾಡಬಹುದು ಎಂದು ಹೇಳಿಕೊಂಡಿದ್ದ. ಹೀಗಾಗಿ ಆಕೆಯ ಸಹಾಯದಿಂದ ಅಹ್ಮದಾಬಾದ್‌, ತಮಿಳುನಾಡು ಮತ್ತು ಮುಂಬಯಿಯಲ್ಲಿ ಚಿನ್ನದ ಕಳ್ಳಸಾಗಾಣೆ ಮಾಡಿರಬಹುದು ಎಂದು ಎಟಿಎಸ್‌ನ ಹಿರೀಯ ಅಧಿಕಾರಿ ಹೇಳಿಕೊಂಡಿದ್ದಾರೆ.

ಬಡತನ ಹಾಗೂ ವಿದ್ಯಾಭ್ಯಾಸದ ಕೊರತೆ ಈ ಯುವಕರನ್ನು ಇಂಥ ಕೆಲಸಕ್ಕೆ ಎಳೆಯುತ್ತದೆ. ಆದರೆ ಕೆಲವು ಚೆನ್ನಾಗಿ ಓದಿದ ಜನ ಕೂಡ ಪ್ರಾಣ ತೆಗೆಯುವ ಕೆಲಸಕ್ಕೆ ಒಪ್ಪುವದು ಸೋಜಿಗ

ಇದೇ ವೇಳೆ ಎಟಿಎಸ್‌ ಶಾಝಿಯಾ ಎಂಬ ಮಹಿಳೆಯನ್ನೂ ಸಹ ಹುಡುಕುತ್ತಿದ್ದು, ಬಂಧಿತ ಉಗ್ರ ಸ್ತಿಂಬರ್ವಾಲನಿಗ ಆಕೆಗೂ ನಿಕಟ ಸಂಬಂಧವಿದ್ದು, ಆಕೆಯೇ ಸ್ತಿಂಬರ್ವಾಲನ ಸೇರಿ ನಾಲ್ಕು ಮುಸ್ಲಿಂ ಯುವಕರೊಂದಿಗೆ ಕೊಲ್ಕತ್ತಾದಿಂದ ಬಾಂಗ್ಲದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.

2014 ರಲ್ಲಿ ಶಾಝಿಯಾ, ಬಾಂಗ್ಲಾದೇಶ ಗಡಿ ದಾಟಿ ಸಿರಿಯಾಕ್ಕೆ ಹೋಗಲು ಯೋಜಿಸುತ್ತಿದ್ದ ನಾಲ್ಕು ಯುವಕರನ್ನು ಸ್ತಿಂಬರ್ವಾಲಾರ ಸ್ನೇಹಿತೆ ಎಂದು ಹೇಳುವ ಮೂಲಕ ಪಡಿಚಯ ಮಾಡಿಕೊಂಡಿದ್ದಳು. ಅಲ್ಲದೇ ಅವಳೇ ಇಂಡೋ-ಬಾಂಗ್ಲಾ ಗಡಿ ದಾಟಿ ಅಲ್ಲಿಂದ ಬಾಂಗೋನ್‌ನಲ್ಲಿ ಮಂಡೊಲೆ ಎಂಬಾತನ್ನು ಭೇಟಿಯಾಗುವಂತೆ ನಾಲ್ವರಿಗೂ ಸೂಚಿಸಿದ್ದಳು. ಮಂಡೊಲೆ ಈ ನಾಲ್ವರಿಗೂ ನಕಲಿ ಪಾಸ್‌ಪೋರ್ಟ್‌ ಮಾಡಿಸಿ ಅವರನ್ನು ಸಿರಿಯಾಗೆ ಕಳುಹಿಸುತ್ತಾನೆ ಎಂದು ಆಕೆ ಹೇಳಿಕೊಂಡಿದ್ದಳು.

ಆದರೆ ಪೊಲೀಸರು ಈ ನಾಲ್ವರ ಯೋಜನೆಯನ್ನು ವಿಫಲಗೊಳಿಸಿ ಬಂಧಿಸಿದ್ದು, ವಿಚಾರಣೆ ವೇಳೆ ಬಂಧಿತ ಆರೋಪಿಗಳನ್ನು ಕರ್ನಾಟಕದ ಭಟ್ಕಳ ಮೂಲದ ಶಫಿ ಆರ್ಮಾರ್, ಅವರ ಸಹೋದರ ಅಲ್ತಾಫ್ ಆರ್ಮಾರ್ ಎಂದು ಗುರುತಿಸಲಾಗಿತ್ತು.

Comments are closed.