ರಾಷ್ಟ್ರೀಯ

ದೆಹಲಿಯಲ್ಲಿ ಪಟಾಕಿ ನಿಷೇಧಕ್ಕೆ ಕಾರಣರಾಗಿದ್ದ ಈ ಮಕ್ಕಳಿಂದ ಈಗ ದೇಶಾದ್ಯಂತ ಪಟಾಕಿ ನಿಷೇಧಕ್ಕೆ ಮನವಿ

Pinterest LinkedIn Tumblr


ನವದೆಹಲಿ: ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧಕ್ಕೆ ಕಾರಣರಾಗಿದ್ದ ಈ ಮೂವರು ಮಕ್ಕಳು ಈಗ ಭಾರತವನ್ನು ಪಟಾಕಿ ಮುಕ್ತಗೊಳಿಸಲು ಹೊರಟಿದ್ದಾರೆ.

ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧವನ್ನು ವಿಸ್ತರಿಸಬೇಕು ಮತ್ತು ದೇಶಾದ್ಯಂತ ಪಟಾಕಿ ಮಾರಾಟವನ್ನು ನಿಷೇಧಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜುನ್ ಗೋಪಾಲ್, ಆರವ್ ಭಂಡಾರಿ ಮತ್ತು ಜೋಯ ರಾವ್ ಭಸಿನ್ ಎಂಬ ಮೂವರು ಮಕ್ಕಳು, ದೇಶಾದ್ಯಂತ ಪಟಾಕಿ ಮರಾಟ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪಟಾಕಿ ನಿಷೇಧದ ನಡುವೆಯೂ ದೀಪಾವಳಿ ನಂತರ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ನಿಷೇಧವನ್ನು ವಿಸ್ತರಿಸಬೇಕು ಮತ್ತು ದೇಶಾದ್ಯಂತ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಸಬೇಕು ಎಂದು ಮನವಿ ಮಾಡಿರುವುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಮುಂದೆ ಮದುವೆ ಸೀಸನ್ ಸೇರಿದಂತೆ ಕ್ರಿಸ್ ಮಸ್ ಹಾಗೂ ಹೊಸ ವರ್ಷ ಬರುತ್ತಿದ್ದು, ಈ ವೇಳೆ ಪಟಾಕಿ ಸಿಡಿಸುವುದು ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ನಗರಗಳ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪರಿಸರ ಮಾಲಿನ್ಯದ ಮಟ್ಟ ತಗ್ಗಿಸಲು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ದೀಪಾವಳಿ ವೇಳೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಪಟಾಕಿ ಮಾರಾಟಕ್ಕೆ ನಿಷೇಧ ಹೇರಿತ್ತು.

Comments are closed.