ನವದೆಹಲಿ: ಮಹಿಳೆಯ ಕೋಪ ವಿಕೋಪಕ್ಕೆ ತಿರುಗಿದರೆ ಏನಾಗಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ದೋಹಾ-ಬಾಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತನ್ನ ಪತಿ ನಿದ್ದೆ ಮಾಡುತ್ತಿರಬೇಕಾದರೆ, ಫಿಂಗರ್ ಸ್ಕ್ಯಾನರ್ ಮೂಲಕ ಆತನ ಮೊಬೈಲ್ ನ್ನು ಅನ್ ಲಾಕ್ ಮಾಡಿದ್ದಾರೆ, ಈ ವೇಳೆ ಪತಿ ತನಗೆ ಮೋಸ ಮಾಡುತ್ತಿರುವುದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ವಿಮಾನದಲ್ಲೇ ಆಕ್ರೋಶಭರಿತರಾಗಿ ವರ್ತಿಸಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಮಹಿಳೆ ಪತಿಯ ವಿರುದ್ಧ ಕೂಗಾಡುವುದೂ ಅಲ್ಲದೇ, ವಿಮಾನದಲ್ಲಿದ್ದ ಸಿಬ್ಬಂದಿಯೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದಾಗಿ ದೋಹಾ-ಬಾಲಿ ವಿಮಾನದ ಮಾರ್ಗವನ್ನು ಚೆನ್ನೈಗೆ ಬದಲಾವಣೆ ಮಾಡಿ ಅನುಚಿತವಾಗಿ ವರ್ತಿಸಿದ್ದ ಮಹಿಳೆ, ಆಕೆಯ ಪತಿ ಹಾಗೂ ಮಗುವನ್ನು ಆಫ್ ಲೋಡ್ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕೌಲಾಲಾಂಪುರ್ ಗೆ ತೆರಳುವ ವಿಮಾನದಲ್ಲಿ ಕಳಿಸಲಾಗಿದೆ. ನ.5 ರಂದು ಕತಾರ್ ಏರ್ ವೇಸ್ ನಲ್ಲಿ ಈ ಘಟನೆ ನಡೆದಿದೆ.
Comments are closed.