ಜಮ್ಮು: ಹೊಸ 500 ಮತ್ತು 2,000 ರೂ.ಗಳ ಸುಮಾರು 44,000 ರೂ. ಮುಖ ಬೆಲೆಯ ನಕಲಿ ನೋಟುಗಳನ್ನು ಹೊಂದಿದ ಮೂವರನ್ನು ಜಮ್ಮು ಜಿಲ್ಲೆಯಲ್ಲಿ ಇಂದು ಸೋಮವಾರ ಬಂಧಿಸಲಾಗಿದ್ದು ಅವರ ಕೈಯಲ್ಲಿದ್ದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಹರ್ಮೀತ್ ಸಿಂಗ್, ಮೊಹಿಂದರ್ ಕುಮಾರ್ ಅಲಿಯಾಸ್ ಬಾಬಾ ಮತ್ತು ರಮೇಶ್ ಕುಮಾರ್ ಅಲಿಯಾಸ್ ಡಾಕ್ಟರ್ ಎಂದು ಗುರುತಿಸಲಾಗಿದೆ. ಜಮ್ಮು ಜಿಲ್ಲೆಯ ಭತ್ಯಾರಿಯ ಬಿಸ್ನಾಹ್ ಎಂಬ ಪ್ರದೇಶದಲ್ಲಿ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದರು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ
Comments are closed.