ರಾಷ್ಟ್ರೀಯ

ಶ್ರೀನಗರ ಬಿಎಸ್‌ಎಫ್ ಶಿಬಿರ ದಾಳಿ ನಮ್ಮದೇ: ಮಸೂದ್‌ ಅಜರ್‌

Pinterest LinkedIn Tumblr


ಹೊಸದಿಲ್ಲಿ : ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎನ್ನುತ್ತಿದ್ದ ಚೀನಕ್ಕೆ ಈಗ ಮುಖಕ್ಕೆ ಹೊಡೆವ ರೀತಿಯಲ್ಲಿ ಝೀ ಮೀಡಿಯಾ, ಆಡಿಯೋ ಕ್ಷಿಪ್‌ ಸಾಕ್ಷ್ಯವನ್ನು ಬಿಡುಗಡೆ ಮಾಡಿದೆ.

ಈ ಆಡಿಯೋ ಕ್ಲಿಪ್‌ನಲ್ಲಿ ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌, ಕಳೆದ ಅಕ್ಟೋಬರ್‌ 3ರಂದು ಶ್ರೀನಗರದಲ್ಲಿನ ಬಿಎಸ್‌ಎಫ್ ಕ್ಯಾಂಪಿನ ಮೇಲೆ ಜೆಇಎಂ ಉಗ್ರರೇದಾಳಿ ನಡೆಸಿದ್ದರು ಎಂಬುದನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ.

ಸುಮಾರು 45 ನಿಮಿಷಗಳ ಅವಧಿಯ ಈ ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಸೂದ್‌ ಹೇಳುತ್ತಾನೆ : ಇಡಿಯ ವಿಶ್ವವೇ ಜಿಹಾದ್‌ ಕೊನೆಗೊಳಿಸುವುದಾಗಿ ಕೊಚ್ಚಿಕೊಳ್ಳುತ್ತಿರುವಾಗಲೇ ನಮ್ಮ ಜೆಇಎಂ ಉಗ್ರರು ಶ್ರೀನಗರದ ಬಿಎಸ್‌ಎಫ್ ಕ್ಯಾಂಪ್‌ ಮೇಲೆ ದಾಳಿ ನಡೆಸಿದ್ದಾರೆ’.

ಅಜರ್‌ ಮಸೂದ್‌ ಕಳೆದ 27 ತಾಸುಗಳಿಂದಲೂ ಪಾಕಿಸ್ಥಾನದಲ್ಲಿ ಧರ್ಮ ದ ಹೆಸರಲ್ಲಿ ಯುವಕರನ್ನು ಭಾವನಾತ್ಮಕವಾಗಿ ಬ್ಲಾಕ್‌ ಮೇಲ್‌ ಮಾಡುತ್ತಾ ಅವರಿಗೆ ಉಗ್ರ ತರಬೇತಿ ನೀಡಿ ಅವರನ್ನು ಫಿದಾಯೀಂ ಗಳನ್ನಾಗಿ ರೂಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡು ಬಂದಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಕಿಡಿ ಕಾರುತ್ತಾ ಅಜರ್‌ ಮಸೂದ್‌, “ಈ ಇಬ್ಬರೂ ನಾಯಕರು ಇಸ್ಲಾಮಿಕ್‌ ಉಗ್ರರನ್ನು ದ್ವೇಷಿಸುತ್ತಾರೆ ಮತ್ತು ನಮ್ಮನ್ನು ಕೊಲ್ಲಲು ಬಯಸುತ್ತಾರೆ’ ಎಂದು ಹೇಳಿದ್ದಾನೆ.

ಮಸೂದ್‌ ಅಜರ್‌ನ ಈಚಿನ ಭಾಷಣವು ಪಾಕಿಸ್ಥಾನದ ಮಸೀದಿಯೊಂದರ ಒಳಗೆ ನಡೆದಿತ್ತು ಎನ್ನುವುದು ಗಮನಾರ್ಹವಾಗಿದೆ.

-ಉದಯವಾಣಿ

Comments are closed.