ರಾಷ್ಟ್ರೀಯ

ಇದೆಂತಾ ಕ್ರೂರಿಗಳ ದೌರ್ಜನ್ಯ: ಕುದುರೆಗೆ ಒತ್ತಾಯಪೂರ್ವಕ ಮದ್ಯ ಕುಡಿಸಿ ಹತ್ಯೆಗೈದ ದುರುಳರು

Pinterest LinkedIn Tumblr


ಬಾಗಪತ್: ಪ್ರಾಣಿಗಳ ಮೇಲಿನ ಕ್ರೌರ್ಯದ ಅಮಾನುಷ ಕೃತ್ಯಕ್ಕೆ ಇಲ್ಲಿದೆ ಉದಾಹರಣೆ. ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಕುದುರೆಯೊಂದಕ್ಕೆ ಒತ್ತಾಯಪೂರ್ವಕವಾಗಿ ಅತಿಯಾದ ಮದ್ಯ ಕುಡಿಸಿ ಹತ್ಯೆಗೈದ ಹೇಯ ಘಟನೆ ವರದಿಯಾಗಿದೆ
ಕಳೆದ ಕೆಲ ದಿನಗಳ ಹಿಂದೆ ಹಿಲ್ವಾರಿ ಗ್ರಾಮದಲ್ಲಿ ಕುಟುಂಬವೊಂದು ಆಯೋಜಿಸಲಾದ ಚಾಟ್ಟಿ ಕಾರ್ಯಕ್ರಮದಲ್ಲಿ( ಗಂಡು ಮಗು ಜನಿಸಿದ ಆರನೇ ದಿನದಂದು ಆಚರಿಸುವ ಕಾರ್ಯಕ್ರಮ) ಕೆಲ ಯುವಕರು ಒತ್ತಾಯಪೂರ್ವಕವಾಗಿ ಕುದುರೆಗೆ ಅತಿಯಾದ ಮದ್ಯ ಕುಡಿಸಿದ್ದಾರೆ. ನಂತರ ಕುದುರೆ ಸಾವನ್ನಪ್ಪಿ ಕೆಳಗೆ ಬಿದ್ದ ನಂತರ ಅದರ ಸುತ್ತಲು ನೃತ್ಯ ಮಾಡಿ ಕ್ರೂರತೆಯನ್ನು ಮೆರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಕುದುರೆಯ ಮಾಲೀಕ, ಯುವಕರನ್ನು ತಡೆಯಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಯುವಕರು ಆತನನ್ನು ಹಿಂದಕ್ಕೆ ತಳ್ಳಿಹಾಕಿದರು ಎಂದು ಮೂಲಗಳು ತಿಳಿಸಿವೆ.

ಸಾವಿರಾರು ಜನರು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಆದರೆ, ಯಾರೊಬ್ಬರು ತಡೆಯುವ ಪ್ರಯತ್ನ ಮಾಡಲಿಲ್ಲ. ಎಲ್ಲರು ನಗು ನಗುತ್ತಲೇ ಯುವಕರ ಕೃತ್ಯಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ತನಿಖೆಯನ್ನು ನಡೆಸಿ ಮಾಹಿತಿ ಸತ್ಯವಾಗಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.