ರಾಷ್ಟ್ರೀಯ

ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆಗೆ 50 ಲಕ್ಷ ಬಿಲ್‌!

Pinterest LinkedIn Tumblr


ಹೊಸದಿಲ್ಲಿ: ಜೀವಂತ ಮಗುವನ್ನು ಮೃತಪಟ್ಟಿದೆ ಎಂದು ಹೇಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ದಿಲ್ಲಿಯ ಪ್ರಸಿದ್ಧ ಆಸ್ಪತ್ರೆ ಮ್ಯಾಕ್ಸ್‌ ಆಸ್ಪತ್ರೆಯ ಮತ್ತೊಂದು ಪ್ರಕರಣ ಬಯಲಾಗಿದ್ದು, ಮಗುವನ್ನು ಬದುಕಿಸಲು ಬೇಕಾದ ನರ್ಸರಿಗೆ ಆಸ್ಪತ್ರೆ ಸಿಬ್ಬಂದಿಗಳು 50 ಲಕ್ಷ ರೂ. ಬಿಲ್‌ ಮಾಡಿರುವುದಾಗಿ ಮಗುವಿನ ತಂದೆ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಅನೀಶ್ ಎಂಬವರ ಆರು ತಿಂಗಳ ಗರ್ಭಿಣಿ ಪತ್ನಿ ವರ್ಷಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಿದ ಅನೀಶ್ ಬಳಿ ವೈದ್ಯರು ಮಗು ಬದುಕುಳಿಯುವ ಸಾಧ್ಯತೆ ಕೇವಲ 10 ರಿಂದ 15 ರಷ್ಟು ಮಾತ್ರಾ ಇದೆ ಎಂದು ಹೇಳಿದ್ದರು. ಕೂಡಲೇ ವರ್ಷಾಗೆ 35,000 ಮೌಲ್ಯದ 3 ಇಂಜೆಕ್ಷನ್ ನೀಡಿದ ವೈದ್ಯರು, ಮಕ್ಕಳು ಬದುಕುವ ಸಾಧ್ಯತೆ ಶೇ.30ರಷ್ಟಾಗಿದೆ ಎಂದು ಅನೀಶ್‌ಗೆ ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ವರ್ಷಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಟ್ಟಾರೆ ಮಕ್ಕಳನ್ನು ಗರ್ಭದಲ್ಲೇ ಕಾಪಾಡಲು ಆಸ್ಪತ್ರಗೆ 50 ಲಕ್ಷ ಖರ್ಚಾಗಿದೆ ಎಂದು ಆಡಳಿತ ವರ್ಗ ಹೇಳಿತ್ತು.

‘ಆಸ್ಪತ್ರೆ ಸಿಬ್ಬಂದಿಗಳು ನಮ್ಮ ಮಕ್ಕಳು ಜೀವಂತ ಇರುವಾಗಲೇ ಮೃತಪಟ್ಟಿವೆ ಎಂದು ಹೇಳಿ ಬದುಕಿರುವ ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೆ ಮ್ಯಾಕ್ಸ್‌ ಆಸ್ಪತ್ರೆ ದೊಡ್ಡ ತಪ್ಪು ಮಾಡಿದೆ’ ಎಂದು ಅನೀಶ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಮರಣ ಪ್ರಮಾಣ ಪತ್ರದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಲಿಮಾರ್ ಭಾಗ್‌ನಲ್ಲಿರುವ ಮ್ಯಾಕ್ಸ್ ಹಾಸ್ಪಿಟಲ್‌ನಲ್ಲಿ ಗುರುವಾರ ಅವಳಿ ಮಕ್ಕಳ ಜನನವಾಗಿತ್ತು. ಆ ಮಕ್ಕಳು ಮೃತಪಟ್ಟಿವೆ ಎಂದು ಪ್ಲಾಸ್ಟಿಕ್ ಕವರೊಂದರಲ್ಲಿ ಹಾಕಿ ಮೃತದೇಹವನ್ನು ಹೆತ್ತವರಿಗೆ ಹಸ್ತಾಂತರಿಸಲಾಗಿತ್ತು. ಕೊರಿಯರ್ ಪಾರ್ಸೆಲ್ ಮಾಡುವಂತೆ ಮಕ್ಕಳ ಮೃತದೇಹವನ್ನು ಪ್ಯಾಕ್ ಮಾಡಿ ನೀಡಿದ್ದರು. ಮೂರು ಕೀ. ಮೀ ಸಂಚರಿಸಿದಾಗ ಒಂದು ಬ್ಯಾಗ್‍ನಲ್ಲಿ ಚಲನೆ ಇದ್ದಂತೆ ಕಂಡು ಬಂತು, ತಕ್ಷಣವೇ ಆ ಬ್ಯಾಗ್ ತೆರೆದು ನೋಡಿದಾಗ ಮಗು ಉಸಿರಾಡುತ್ತಿತ್ತು. ಬಳಿಕ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಪರಿಶೀಲಿಸಿದ ವೇಳೆ ಮಗು ಜೀವಂತ ಇರುವುದು ಕಂಡು ಬಂದಿತ್ತು.

Comments are closed.