ರಾಷ್ಟ್ರೀಯ

ವಾಜಪೇಯಿ ಜನ್ಮದಿನ: 93 ಕೈದಿಗಳ ಬಿಡುಗಡೆ ಮಾಡಲು ಉ.ಪ್ರ. ಸರಕಾರ ನಿರ್ಧಾರ

Pinterest LinkedIn Tumblr


ಲಖನೌ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟು ಹಬ್ಬದ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ 93 ಬಂಧಿತ ಕೈದಿಗಳನ್ನು ಇಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅವಧಿಯನ್ನು ಪೂರೈಸಿರುವ 93 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಗುರುತಿಸಲಾಗಿದ್ದು, ಅವರನ್ನು ಬಿಡುಗಡೆಮಾಡಲು ತೀರ್ಮಾನಿಸಲಾಗಿದೆ ಎಂದು ಅಲ್ಲಿನ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ಸಿಲುಕಿ ಜೈಲುವಾಸಿಗಳಾಗಿದ್ದ 93 ಕೈದಿಗಳ ಪೈಕಿ ಬಹುತೇಕರ ಶಿಕ್ಷಾವಧಿ ಪೂರ್ಣಗೊಂಡಿದ್ದರೂ ಅವರಿಗೆ ನ್ಯಾಯಾಲಯ ವಿಧಿಸಿದ್ದ ದಂಡ ಕಟ್ಟಲು ಸಾಧ್ಯವಾಗಿಲ್ಲ

ಈ ನಿಟ್ಟಿನಲ್ಲಿ ಸನ್ನಡತೆ ಕೈದಿಗಳ ದಂಡವನ್ನು ರದ್ದುಪಡಿಸಿ ಜೈಲುಗಳಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಅರವಿಂದ್ ಕುಮಾರ್ ಮಾಹಿತಿ ನೀಡಿದ್ದಾರೆ.

Comments are closed.