ಚೆನ್ನೈ: ರಾಜಕೀಯಕ್ಕೆ ನಾನು ಹೊಸಬನಲ್ಲ ಎಂದು ಹೇಳುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಸೇರ್ಪಡೆ ಕುರಿತು ಪರೋಕ್ಷ ಘೋಷಣೆ ಮಾಡಿದ್ದಾರೆ.
ಚೆನ್ನೈನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್, ರಾಜಕೀಯಕ್ಕೆ ನಾನು ಹೊಸಬನಲ್ಲ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಸೇರ್ಪಡೆ ಕುರಿತು ಸಣ್ಣ ಮಾಹಿತಿ ನೀಡಿದ್ದಾರೆ. ‘ಡಿಸೆಂಬರ್ 31 ರಂದು ನನ್ನ ರಾಜಕೀಯ ಪ್ರವೇಶದ ಬಗ್ಗೆ ಘೋಷಿಸಲಿದ್ದೇನೆ’ ಎಂದಿದ್ದಾರೆ, ಆದರೆ ಸ್ವಂತ ಪಕ್ಷ ಸ್ಥಾಪಿಸುತ್ತಾರೊ ಅಥವಾ ಯಾವುದಾದರೊ ಪಕ್ಷ ಸೇರುತ್ತಾರೊ ಎಂಬುದರ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.
“ನನಗೆ ರಾಜಕೀಯ ಹೊಸದಲ್ಲ, ನಾನು 1990ರಿಂದಲೂ ರಾಜಕೀಯಯನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದೇನೆ ಎಂದಿದ್ದಾರೆ. ಸಮರಕ್ಕಿಳಿದ ಮೇಲೆ ಗೆಲ್ಲುವುದೊಂದೇ ಗುರಿ ಎಂದು ಸಿನಿಮಾ ಶೈಲಿಯಲ್ಲಿ ಹೇಳಿದ ರಜನೀಕಾಂತ್ ರಾಜಕೀಯದ ಕಷ್ಟಗಳ ಬಗ್ಗೆಯೂ ಅರಿವಿದೆ ಆದರೆ ಅದನ್ನೆಲ್ಲಾ ಕೂಲಂಕುಷವಾಗಿ ವಿಮರ್ಶಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ. ಅಂತೆಯೇ ಇಷ್ಟು ದಿನ ತಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ರಜನೀಕಾಂತ್ ಇಂದಿನಿಂದ ಸತತ ಆರು ದಿನಗಳ ಕಾಲ ತಮಿಳುನಾಡಿನ ಬೇರೆ ಬೇರೆ ಕಡೆಗಳಲ್ಲಿ ಅಭಿಮಾನಿಗಳ ಜೊತೆಗೆ ಸಂವಾದ ಮಾಡಲಿದ್ದಾರೆ, ಸಂವಾದದ ಮೂಲಕ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಭಿಪ್ರಾಯ ಸಂಗ್ರಹಣೆಯನ್ನೂ ಮಾಡಲಿದ್ದಾರೆ.
ಇಂದಿನ ಸಭೆಯಲ್ಲಿ ಒಟ್ಟು 18 ಜಿಲ್ಲೆಯ ಸುಮಾರು 1 ಸಾವಿರ ಅಭಿಮಾನಿಗಳು ಪಾಲ್ಗೊಂಡಿದ್ದರು. ಇದೇ ಡಿಸೆಂಬರ್ 31ರಂದು ಮತ್ತೆ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದ್ದು, ಅಂದು ತಮ್ಮ ನೂಚನ ರಾಜಕೀಯ ಪಕ್ಷ ಹಾಗೂ ರಾಜಕೀಯ ಸೇರ್ಪಡೆ ಕುರಿತು ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.
Comments are closed.