ರಾಷ್ಟ್ರೀಯ

ಗೋವಾದಲ್ಲಿ ಸೋನಿಯಾ ಗಾಂಧಿ ಜಾಲಿ ರೈಡ್!

Pinterest LinkedIn Tumblr

ಗೋವಾ: ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇದೀಗ 71 ವರ್ಷದ ಸೋನಿಯಾ ಗಾಂಧಿ ಸೈಕಲ್ ತುಳಿಯುತ್ತಿರುವ ಮತ್ತು ಪ್ರವಾಸಿಗರೊಂದಿಗೆ ತೆಗೆದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಎಐಸಿಸಿ ಅಧ್ಯಕ್ಷೆಯಾಗಿ 19 ವರ್ಷ ಅಧಿಕಾರದಲ್ಲಿದ್ದ ಸೋನಿಯಾ ಗಾಂಧಿ, ಡಿ.16ರಂದು ಅಧ್ಯಕ್ಷ ಸ್ಥಾನವನ್ನು ರಾಹುಲ್‌ ಗಾಂಧಿಗೆ ಬಿಟ್ಟುಕೊಟ್ಟಿದ್ದರು.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ವಿಶ್ರಾಂತಿಗಾಗಿ ಡಿ.26ರಂದು ದೆಹಲಿಯಿಂದ ಗೋವಾಗೆ ತೆರಳಿದ್ದರು. ಜನವರಿ ಮೊದಲ ವಾರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾದ ಸಮಯದಲ್ಲಿ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನಡೆದಿದ್ದು, ಫಲಿತಾಂಶದ ಬಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಇತ್ತೀಚೆಗೆ ಪರಮರ್ಶೆ ನಡೆಸಿದ್ದರು.

Comments are closed.