ರಾಷ್ಟ್ರೀಯ

ಪ್ರಧಾನಿ ಮೋದಿ ಇಷ್ಟೆಲ್ಲಾ ಮಾಡಿದ್ದು ಒಂದು ಕಪ್ ಕಾಫಿಗೋಸ್ಕರ!

Pinterest LinkedIn Tumblr


ಶಿಮ್ಲಾ: ಪ್ರಧಾನಿ ಮೋದಿ ತಮ್ಮ ಜೀವನದ ಆರಂಭದ ದಿನಗಳಲ್ಲಿ ಚಹಾ ಮಾರಿ ಬದುಕುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹಳೆಯ ದಿನಗಳನ್ನು ಆಗಾಗ ಸ್ಮರಿಸಿಕೊಳ್ಳುವ ಪ್ರಧಾನಿ ಮೋದಿಗೆ ಶಿಮ್ಲಾ ಭೇಟಿ ಸಂದರ್ಭದಲ್ಲೂ ಹಳೆಯ ನೆನಪೊಂದು ಕಾಡಿದೆ.

ನಿನ್ನೆ ಹಿಮಾಚಲ ಪ್ರದೇಶದಲ್ಲಿ ನೂತನ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ದಾರಿ ಮಧ್ಯೆ ತಾವು ಹಳೆಯ ದಿನಗಳಲ್ಲಿ ಕಾಫಿ ಕುಡಿಯುತ್ತಿದ್ದ ಕೆಫೆಗೆ ಬಂದು ಕಾಫಿ ಸವಿದಿದ್ದಾರೆ.

ದಾರಿ ಮಧ್ಯೆ ಇಂಡಿಯನ್ ಕಾಫಿ ಹೌಸ್ ಎದುರು ವಾಹನ ನಿಲ್ಲಿಸಿದ ಪ್ರಧಾನಿ ಮೋದಿ ಕಾಫಿ ಸವಿದರು. ನಂತರ ಅಲ್ಲಿನ ಸಿಬ್ಬಂದಿ ಜತೆ ಕೈ ಕುಲುಕಿ ಕಾಫಿಗೆ ಇಂದಿಗೂ ಅಂದಿನದ್ದೇ ರುಚಿ ಎಂದು ಶಹಬ್ಬಾಶ್ ಗಿರಿ ಕೊಟ್ಟು ಮರಳಿದರು. ಪ್ರಧಾನಿ ಭೇಟಿ ವೇಳೆ ಇಲ್ಲಿ ಸಾವಿರಾರು ಜನ ಸೇರಿದ್ದರು.

Comments are closed.