ರಾಷ್ಟ್ರೀಯ

ಈ ವರ್ಷ ಸ್ತ್ರೀಯರ ಪ್ರಾಬಲ್ಯ ಜಾಸ್ತಿ…

Pinterest LinkedIn Tumblr


2018ನೇ ಇಸವಿಯು ಕನ್ಯಾ ಲಗ್ನದಲ್ಲಿ ಪ್ರಾರಂಭವಾಗುತ್ತದೆ. ಲಗ್ನಾಧಿಪತಿಯಾದ ಬುಧ ತನ್ನ ನಕ್ಷತ್ರದಲ್ಲೇ ಇದ್ದು ಉಚ್ಚ ಚಂದ್ರನ ದೃಷ್ಟಿಗೊಳಗಾಗಿ ಸ್ತ್ರೀ ರಾಶಿಯಲ್ಲಿದ್ದಾನೆ.

ವರ್ಷಾಪತಿ ಚಂದ್ರನು ಉಚ್ಚನಾಗಿ ಸ್ತ್ರೀಗ್ರಹವಾಗಿದ್ದು ಸ್ತ್ರೀರಾಶಿಯಲ್ಲಿದ್ದಾನೆ. ಹಾಗಾಗಿ ಈ ವರ್ಷ ಸ್ತ್ರೀಯರ ಪ್ರಾಬಲ್ಯ ಜಾಸ್ತಿ.

ವ್ಯಯಾಧಿಪತಿಯಾದ ರವಿಯು ಚತುರ್ಥದಲ್ಲಿ ಶನಿಯೊಂದಿಗಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ಬರೀ ಗೊಂದಲ ಹಾಗೂ ಅಸ್ಥಿರತೆ ಕಂಡುಬರುವುದು. ಭಾಗ್ಯಾಧಿಪತಿಯಾದ ಶುಕ್ರನು ಚತುರ್ಥದಲ್ಲಿ ದಿಗ್ಬಲವನ್ನು ಹೊಂದಿರುವುದೂ, ಸ್ವನಕ್ಷ ತ್ರದಲ್ಲಿರುವುದೂ ಹಾಗೂ ಏಕಾದಶಾಧಿಪತಿಯಾದ ಚಂದ್ರನು ನವಮದಲ್ಲಿ ಉಚ್ಚನಾಗಿರುವುದರಿಂದ ಸಿನೆಮಾ ರಂಗದಲ್ಲಿ ಉತ್ತಮ ಬೆಳವಣಿಗೆ ಕಂಡುಬರುವುದು.

ಷೇರುಪೇಟೆ, ಮಾಹಿತಿ ಮತ್ತು ತಂತ್ರಜ್ಞಾನ , ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಇದ್ದರೂ ಏರುಪೇರುಂಟಾಗುವುದು. ರಿಯಲ್‌ ಎಸ್ಟೇಟ್‌ ವ್ಯಾಪಾರ, ಭೂಮಿ ವ್ಯವಹಾರಗಳಲ್ಲಿ ಯಾವ ಬದ​ಲಾವಣೆಗಳೂ ಕಂಡುಬರುವುದಿಲ್ಲ.

ಎರಡು ಚಂದ್ರ ಗ್ರಹಣ: ಈ ವರ್ಷ ಎರಡು ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಜನವರಿ 31ರಂದು ಬುಧವಾರ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುವುದು. ಜುಲೈ 27ರಂದು ಶುಕ್ರವಾರ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ. ಕಟಕರಾಶಿ ಹಾಗೂ ಮಕರರಾಶಿಯವರಿಗೆ ಗ್ರಹಣ ದೋಷವುಂಟಾಗುತ್ತದೆ.

ಒಟ್ಟಿನಲ್ಲಿ 2018 ಚಂದ್ರನ ಅಧೀನದಲ್ಲಿದ್ದು, ಆ ಪರಮೇಶ್ವರಿಯನ್ನುಆರಾಧಿಸಿದಲ್ಲಿ ಸರ್ವವೂ ಒಳ್ಳೆಯದಾಗುವುದು.

Comments are closed.