ರಾಷ್ಟ್ರೀಯ

ಮುಸ್ಲಿಂರು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ; ವಿವಾದ ಸೃಷ್ಟಿಸಿದ ಸಿಂಘಾಲ್ ಪೋಸ್ಟ್

Pinterest LinkedIn Tumblr


ಜೈಪುರ : ಹಿಂದೂಗಳನ್ನು ತಮ್ಮ ದೇಶದಲ್ಲಿ ಮೂಲೆಗುಂಪು ಮಾಡಿ ಮುಸ್ಲಿಂಮರು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯ ಮೂಲಕ ಫೇಸ್ ಬುಕ್ ಪೋಸ್ಟ್ ಪ್ರಕಟಿಸಿ ಬಿಜೆಪಿಯ ಅಲ್ವಾರ ಶಾಸಕ ಬನ್ವಾರಿ ಲಾಲ್ ಸಿಂಘಾಲ್ ವಿವಾದಕ್ಕೆ ಸಿಲುಕಿದ್ದಾರೆ.

ಟಿವಿ ಚಾನಲ್ ವೊಂದರಲ್ಲಿ ಮುಸ್ಲಿಂ ಜನಸಂಖ್ಯೆಯ ಕುರಿತು ಚರ್ಚೆ ನಡೆಸುತ್ತಿರುವಾಗ ಪ್ರತಿಕ್ರಿಯೆಯ ರೂಪದಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಮುಸ್ಲಿಂ ಜನಸಂಖ್ಯೆ ತಡೆಯದಿದ್ದರೆ ದೇಶದಲ್ಲಿ ಮುಂದೊಂದು ದಿನ ಮುಸ್ಲಿಂ ಪ್ರಧಾನಿ, ಮುಸ್ಲಿಂ ರಾಷ್ಟ್ರಪತಿ, ಹಾಗೂ ರಾಜ್ಯಗಳಲ್ಲಿಯೂ ಮುಸ್ಲಿಂ ಮುಖ್ಯಮಂತ್ರಿಗಳೆ ಇರುತ್ತಾರೆ ಎಂದು ಹೇಳಿದ್ದಾರೆ.

ಹೆಚ್ಚು ಮಕ್ಕಳನ್ನು ಪಡೆಯುವ ಸಲುವಾಗಿ ಪತ್ನಿಯರನ್ನು ಖರೀದಿಸುತ್ತಿದ್ದಾರೆ, ಆದ್ದರಿಂದ ದೇಶದಲ್ಲಿ ಯಾರು ಕೂಡ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬಾರದು ಎಂಬ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

Comments are closed.