ಪುಣೆ: ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಚೋಧನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗುಜರಾತ್ ಶಾಸಕ ಹಾಗೂ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಹಾಗೂ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಲೀದ್ ವಿರುದ್ಧ ಪುಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಡಿಸೆಂಬರ್ 31ರಂದು ಎಲ್ಗಾರ್ ಪರಿಷದ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇಬ್ಬರು ಕೂಡ ಪ್ರಚೋದನಕಾರಿ ಭಾಷಣ ಮಾಡಿದ್ದಾಗಿ ಅಕ್ಷಯ್ ಬಿಕಂದ್ ಮತ್ತು ಆನಂದ್ ದೋಂಡ್ ಎಂಬುವರು ಖಾಲಿದ್ ಹಾಗೂ ಮೇವಾನಿ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯಲ್ಲಿ ಹುಟ್ಟಿಕೊಂಡ ಕಲಹ ರಾಜ್ಯದಾದ್ಯಂತ ವ್ಯಾಪಿಸಿದೆ. ಮುಂಬೈನ ಕೆಲವು ಪ್ರದೇಶಗಳು ಸೇರಿ ಹಲವು ಕಡೆಗಳಲ್ಲಿ ದಲಿತರು ಪ್ರತಿಭಟನೆ ನಡೆಸಿದ್ದು ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಇನ್ನು ದಲಿತರ ಮೇಲಿನ ದೌರ್ಜನ್ಯ ಹಾಗೂ ಪುಣೆಯಲ್ಲಿ ಸಾವನ್ನಪ್ಪಿದ ದಲಿತ ವ್ಯಕ್ತಿಯ ಹತ್ಯೆ ಖಂಡಿಸಿ ದಲಿತ ಸಂಘಟನೆಗಳು ಇಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದವು.
Comments are closed.