ರಾಷ್ಟ್ರೀಯ

ದಲಿತರ ಪ್ರತಿಭಟನೆ: ಥಾಣೆ:ಯಲ್ಲಿ ಸೆಕ್ಷನ್‌ 144 ಜಾರಿ

Pinterest LinkedIn Tumblr


ಥಾಣೆ: ಪುಣೆಯಲ್ಲಿ ಭೀಮಾ ಕೋರೆಗಾಂವ್‌ ಕದನದ 200ನೇ ವರ್ಷಾಚರಣೆ ಸಂಬಂಧ ಆರಂಭವಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಬಂದ್‌ ನಡೆಯುತ್ತಿದ್ದು, ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ.

ಥಾಣೆಯಲ್ಲಿ ಪ್ರತಿಭಟನೆಕಾರರು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಡಿಪೋವನ್ನು ಬಲವಂತದಿಂದ ಮುಚ್ಚಿಸಿದ್ದಾರೆ.

ಪುಣೆ ನಗರದಲ್ಲೂ ಬಂದ್‌ ಸಂಪೂರ್ಣವಾಗಿದ್ದು ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿದೆ. ಕೊಲ್ಲಾಪುರ ನಗರ ಸಾರಿಗೆಯ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ.

ಔರಂಗಾಬಾದ್‌ ನಗರದಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಮೊಬೈಲ್‌ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

Comments are closed.