ರಾಷ್ಟ್ರೀಯ

ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ತ್ರಿವಳಿ ತಲಾಖ್‌

Pinterest LinkedIn Tumblr


ಮೀರತ್‌: ಕಳೆದ ವಾರ ತ್ರಿವಳಿ ತಲಾಖ್‌ ಶಿಕ್ಷಾರ್ಹ ಅಪರಾಧ ಎಂಬ ಕೇಂದ್ರ ಸರಕಾರದ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಮಂಡನೆಗೆ ದಿನಗಣನೆಯಲ್ಲಿರುವ ಸಂದರ್ಭ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ತ್ರಿವಳಿ ತಲಾಖ್‌ ನೀಡುವ ಮೂಲಕ ಪತ್ನಿಯನ್ನು ತ್ಯಜಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳುವ ಮೂಲಕ ವಿಚ್ಛೇದನ ನೀಡಿದ ಘಟನೆ ನಡೆದಿದೆ. ಇದೀಗ ಎರಡನೇ ಮದುವೆಯಾಗಲು ಪತಿ ಮುಂದಾಗಿರುವ ಬಗ್ಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ.

ದಿಲ್ಲಿಯ ಓಕ್ಲಾದ ನಿವಾಸಿ ಗೌದಿಯಾ ಎಂಬಾಕೆ 2016ರಲ್ಲಿ ಅಖೀಲ್‌ ಅಹ್ಮದ್‌ ಎಂಬಾತನನ್ನು ವಿವಾಹವಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ 5 ಲಕ್ಷ ರೂ. ವರದಕ್ಷಿಣೆ ನೀಡುವಂತೆ ಪೀಡಿಸಿದ್ದರು. ಕಳೆದ ಒಂದು ವರ್ಷದಿಂದ ನಿರಂತರವಾಗಿ ಪತಿ ಮತ್ತು ಆತನ ಪೋಷಕರು ಕಿರುಕುಳ ನೀಡುತ್ತಿದ್ದರು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದೆ ಎಂಬ ಕಾರಣಕ್ಕೆ ತ್ರಿವಳಿ ತಲಾಖ್‌ ನೀಡಿ ಮನೆಯಿಂದ ಹೊರಗಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Comments are closed.