ಹೊಸದಿಲ್ಲಿ: ಇ-ಕಾಮರ್ಸ್ ದೈತ್ಯ ಫ್ಲಿಫ್‌ಕಾರ್ಟ್ ಮೊಬೈಲ್ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಘೋಷಿಸುವ ಮೂಲಕ 2018 ಹೊಸ ವರ್ಷವನ್ನು ಬರ ಮಾಡಿಕೊಂಡಿದೆ.
ಫ್ಲಿಫ್‌ಕಾರ್ಟ್ ಮೊಬೈಲ್ ಬೊನನ್ಜಾ ಆಫರ್‌ಗಳು ಜನವರಿ 03ರಿಂದ 05ರ ವರೆಗೆ ಚಾಲ್ತಿಯಲ್ಲಿರಲಿದೆ. ಈ ವೇಳೆಯಲ್ಲಿ ಗ್ರಾಹಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7, ಗೂಗಲ್ ಪಿಕ್ಸೆಲ್ 2, ಶಿಯೋಮಿ ಎಂಐ ಎ1, ರೆಡ್ಮಿ ನೋಟ್ 4, ಹೋನರ್ 6ಎಕ್ಸ್, ಮೊಟೊ ಜಿ5 ಪ್ಲಸ್, ಲೆನೆವೊ ಕೆ8 ಪ್ಲಸ್, ಹೋನರ್ 9ಐ, ಸ್ಯಾಮಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್, ಐಫೋನ್ 8 ಪ್ಲಸ್ ಮುಂತಾದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ಪ್ಯಾನಸೋನಿಕ್, ಅಲ್ಕಾಟೆಲ್, ಸ್ವೈಪ್ ಮುಂತಾದ ಸ್ಮಾರ್ಟ್‌ಗಳಿಗೂ ಆಫರ್‌ಗಳನ್ನು ನೀಡಲಾಗುತ್ತಿದೆ. ಈ ಪೈಕಿ ಗೂಗಲ್ ಪಿಕ್ಸಲ್ 2 ಎಕ್ಸ್‌ಎಲ್ ಖರೀದಿ ವೇಳೆಯಲ್ಲಿ 8,0001 ರೂ.ಗಳ ವರೆಗೆ ಆಫರ್ ನೀಡಲಾಗುತ್ತದೆ.
ರೆಡ್ಮಿ ನೋಟ್ 4 (4GB RAM) ಬೆಲೆ 12,999 ರೂ.ಗಳಿಂದ 10,999 ರೂ.ಗಳಿಗೆ ಇಳಿಕೆಗೊಂಡಿದೆ. ಇದರ ಜತೆಗೆ 534 ರೂ.ಗಳಿಂದ ಮಾಸಿಕ ಇಎಂಐ (no cost EMI), ಬಯ್‌ಬ್ಯಾಕ್ ಗ್ಯಾರಂಟಿ ಹಾಗೂ ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಡ್ ಕಾರ್ಡ್‌ದಾರರಿಗೆ ಹೆಚ್ಚುವರಿ ಶೇಕಡಾ 5ರಷ್ಟು ಡಿಸ್ಕೌಂಟ್ ನೀಡಲಾಗುತ್ತದೆ.
ಸ್ಯಾಮಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ (16GB) ಮಾದರಿಗೂ 1000 ರೂ.ಗಳ ಡಿಸ್ಕೌಂಟ್‌ನೊಂದಿಗೆ 11,999 ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 9000 ರೂ.ಗಳ ವರೆಗಿನ ಎಕ್ಸ್‌ಚೇಂಜ್ ಆಫರ್, 485 ರೂ.ಗಳ ಮಾಸಿಕ ಇಎಂಐ ಹಾಗೂ ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಡ್ ಕಾರ್ಡ್‌ದಾರರಿಗೆ ಹೆಚ್ಚುವರಿ ಶೇಕಡಾ 5ರಷ್ಟು ಡಿಸ್ಕೌಂಟ್ ದೊರಕಲಿದೆ.
ಎಂಐ ಎ1 (4GB)
ಆಫರ್ ಬೆಲೆ: 12,999 ರೂ.
ನೈಜ ಬೆಲೆ: 14,999 ರೂ.
ರೆಡ್ಮಿ ನೋಟ್ 4 (4GB)
ಆಫರ್ ಬೆಲೆ: 10,999 ರೂ.
ನೈಜ ಬೆಲೆ: 12,999 ರೂ.
ಮೊಟೊ ಜಿ5 ಪ್ಲಸ್ (4GB)
ಆಫರ್ ಬೆಲೆ: 9,999 ರೂ.
ನೈಜ ಬೆಲೆ: 16,999 ರೂ.
ಸ್ಯಾಮಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ (64GB)
ಆಫರ್ ಬೆಲೆ: 11,900 ರೂ.
ನೈಜ ಬೆಲೆ: 17,900 ರೂ.
ಲೆನೊವೊ ಕೆ8 ಪ್ಲಾಸ್ (3GB)
ಆಫರ್ ಬೆಲೆ: 8,981 ರೂ.
ನೈಜ ಬೆಲೆ: 10,999 ರೂ.
ಮೊಟೊ ಸಿ ಪ್ಲಸ್ (16GB)
ಆಫರ್ ಬೆಲೆ: 6,999 ರೂ.
ನೈಜ ಬೆಲೆ: 5,999 ರೂ.
ಶಿಯೋಮಿ ಎಂಐ ಮಿಕ್ಸ್ 2 (6GB+128GB)
ಆಫರ್ ಬೆಲೆ: 29,999 ರೂ.
ನೈಜ ಬೆಲೆ: 37,999 ರೂ.
ಐಫೋನ್ 8 ಪ್ಲಸ್ (64GB)
ಆಫರ್ ಬೆಲೆ: 66,499 ರೂ.
ಆಫರ್ ಎಷ್ಟು: 6,501 ರೂ.
Comments are closed.