ರಾಷ್ಟ್ರೀಯ

ಬರುತ್ತಿದೆ ಬರಿ 2000 ರೂ.ಗೆ ಗೂಗಲ್ ಸ್ಮಾರ್ಟ್‌ಫೋನ್!

Pinterest LinkedIn Tumblr


ಹೊಸದಿಲ್ಲಿ: ಸರ್ಚ್ ಎಂಜಿನ್ ದೈತ್ಯ ಗೂಗಲ್ ಸ್ಮಾರ್ಟ್‌ಫೋನ್ ರಂಗಕ್ಕೂ ಕಾಲರಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿದೆ.

ಇದೀಗ ಬರಿ 2000 ರೂ.ಗಳಿಗೆ ಬಜೆಟ್ ಸ್ಮಾರ್ಟ್‌ಫೋನ್ ಪರಿಚಯಿಸುವ ಯೋಜನೆಯಿರಿಸಿಕೊಂಡಿದೆ. ಇದಕ್ಕಾಗಿ ದೇಶೀಯ ಮೊಬೈಲ್ ತಯಾರಿಕಾ ಸಂಸ್ಥೆಗಳಾದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ ಹಾಗೂ ಕಾರ್ಬನ್ ಮುಂತಾದ ಕಂಪನಿಗಳ ಜತೆ ಕೈಜೋಡಿಸಲಿದೆ.

ಈ ಎಲ್ಲ ಬಜೆಟ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋ (ಗೊ ಎಡಿಷನ್) ಓಪರೇಟಿಂಗ್ ಸಿಸ್ಟಂನಿಂದ ನಿಯಂತ್ರಿಯಸ್ಪಡಲಿದೆ. ಗೂಗಲ್ ಗೊ ಎಡಿಷನ್ ಸ್ಮಾರ್ಟ್‌ಫೋನ್‌ಗಳು ಗೂಗಲ್ ಗೊ, ಫೈಲ್ಸ್ ಗೊ, ಗೂಗಲ್ ಮ್ಯಾಪ್ಸ್ ಗೊ ಮುಂತಾದ ಆ್ಯಪ್ಸ್‌ಗಳನ್ನು ಹೊಂದಿರಲಿದೆ. ಹಾಗೆಯೇ 1ಜಿಬಿ ಅಥವಾ 512ಎಂಬಿ ರ‍್ಯಾಮ್ ಇರಲಿದೆ.

ಅಂದ ಹಾಗೆ 2000 ರೂ.ಗಳ ಮೈಕ್ರೋಮ್ಯಾಕ್ಸ್-ಗೂಗಲ್ ಸ್ಮಾರ್ಟ್‌ಫೋನ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

Comments are closed.