ರಾಷ್ಟ್ರೀಯ

ಆಧಾರ್‌, ಪ್ಯಾನ್‌, ವೋಟರ್‌ ಕಾರ್ಡ್‌ ಪಡೆದ ರೊಹಿಂಗ್ಯಾಗಳು

Pinterest LinkedIn Tumblr


ಹೊಸದಿಲ್ಲಿ : ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವ ರೊಹಿಂಗ್ಯಾ ಮುಸ್ಲಿಮರಲ್ಲಿ ಕೆಲವರು ಅಕ್ರಮವಾಗಿ ಆಧಾರ್‌, ಪ್ಯಾನ್‌ ಮತ್ತು ವೋಟರ್‌ ಕಾರ್ಡ್‌ಗಳನ್ನು ಪಡೆದಿರುವ ಪ್ರಕರಣಗಳು ವರದಿಯಾಗಿವೆ.

ಆದರೆ ಹೀಗೆ ಅಕ್ರಮವಾಗಿ ಗುರುತು ಪತ್ರ ಪಡೆಯುವಲ್ಲಿ ಸಫ‌ಲರಾಗಿರುವ ಅಕ್ರಮ ವಲಸಿಗ ರೊಹಿಂಗ್ಯಾಗಳಿಗೆ ವಸತಿ ಸೌಕರ್ಯ ಒದಗಿಸಿದ ಪ್ರಕರಣಗಳು ವರದಿಯಾಗಿಲ್ಲ ಎಂದು ಸರಕಾರ ಇಂದು ಬುಧವಾರ ರಾಜ್ಯಸಭೆಗೆ ತಿಳಿಸಿತು.

ಅಕ್ರಮ ವಲಸಿಗ ರೊಹಿಂಗ್ಯಾಗಳಿಗೆ ಎಲ್ಲಿಯೂ ಕಾನೂನು ಬಾಹಿರವಾಗಿ ವಸತಿ ಸೌಕರ್ಯ ಕಲ್ಪಿಸಲಾದ ಪ್ರಕರಣಗಳು ಈ ವರೆಗೆ ವರದಿಯಾಗಿಲ್ಲ ಎಂದು ಕೇಂದ್ರ ಸಹಾಯಕ ಗೃಹ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ರಾಜ್ಯಸಭೆಗಿಂದು ತಿಳಿಸಿದರು.

-ಉದಯವಾಣಿ

Comments are closed.