ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ.
ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ ಸೇರಿದ ದೀಪಕ್ ಕುಮಾರ್ ಹಾಗೂ ನಿತೀಶ್ ಗಂಜಾನ್ ದೆಹಲಿ ಐಐಟಿಯಲ್ಲಿ ಪ್ರವೇಶ ಪಡೆದವರು. ಬಡತನದ ಮಧ್ಯೆಯೂ ಆದಿವಾಸಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ.
ಈ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಪ್ರತಿಷ್ಠಿತ ಐಐಟಿಯಲ್ಲಿ ಟೆಕ್ಸ್‍ಟೈಲ್ ಬ್ರ್ಯಾಂಚ್‍ನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸಾಧನೆಯಿಂದ ವಿದ್ಯಾರ್ಥಿಗಳ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು ತಮ್ಮ ಈ ಸಾಧನೆಗೆ ಕುಟಂಬಸ್ಥರು ಹಾಗೂ ಜಿಲ್ಲಾಡಳಿತ ಪ್ರೇರಣೆ ಕಾರಣ ಎಂದು ತಿಳಿಸಿದ್ದಾರೆ.
Comments are closed.