ಬರ್ದ್ವಾನ್ (ಪಶ್ಚಿಮ ಬಂಗಾಲ):”ಅಲ್ಲಾವುದ್ದೀನನ ಅದ್ಭುತ ದೀಪದ ಕತೆಯಲ್ಲಿ ಬರುವ ಭೂತದಂತೆ ಹೇಳುವ ಕೆಲಸ ಮಾಡೋ ಭೂತವೊಂದು ಮಾರಾಟಕ್ಕಿದೆ” ಎಂಬ ಸ್ನೇಹಿತನ ಫೋನ್ ಕರೆಯನ್ನು ನಂಬಿದ ಬದ್ವಾನ್‌ನ ರಾಯ್ ಚೌಧರಿ ಎಂಬ ವ್ಯಕ್ತಿ ಬಕರಾ (ಮೂರ್ಖ) ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚೌಧರಿ, ತನ್ನ ಸ್ನೇಹಿತನ ಮಾಹಿತಿ ನಂಬಿ, ಆತ ಸೂಚಿಸಿದ್ದ ಜಾಗಕ್ಕೆ ಮತ್ತೂಬ್ಬ ಸ್ನೇಹಿತ ನೊಂದಿಗೆ ಗುರುವಾರ ಹೋಗಿದ್ದ. ಆಗ ಅವರನ್ನು ಭೇಟಿಯಾದ ನಾಲ್ವರು, ಪೊಲೀಸ್ ಲಾಂಛನವಿದ್ದ ಜೀಪಿನೊಳಗೆ ಅವರನ್ನು ಕೂರಿಸಿಕೊಂಡು ಲಾಡ್ಜ್ ಒಂದಕ್ಕೆ ಕರೆದೊಯ್ದರು.
ಅನಂತರ, ಅವರೇ ವ್ಯಾಪಾರಕ್ಕಿಳಿದು, ಸಾಫ್ಟ್ ಡ್ರಿಂಕ್ ಇದ್ದ ಬಾಟಲಿಯಲ್ಲಿನ 1 ರೂ. ನಾಣ್ಯವೊಂದನ್ನು ತೋರಿಸಿ, ಇದೇ ಭೂತ ಎಂದರಲ್ಲದೆ ಅದರ ಬೆಲೆ 10 ಲಕ್ಷ ರೂ. ಎಂದಿದ್ದಾರೆ. ಬೆಲೆ ಕೇಳಿ ದಂಗಾದ ಚೌಧರಿ, ತನ್ನಲ್ಲಿ ಅಷ್ಟು ಹಣವಿಲ್ಲವೆಂದಿದ್ದಾನೆ. ಆಗ, ಸಿಟ್ಟಿಗೆದ್ದ ವ್ಯಾಪಾರಿಗಳು, ಈತನ ಬಳಿಯಿದ್ದ 600 ರೂ. ಹಾಗೂ ಸ್ನೇಹಿತನ ಬಳಿಯಿದ್ದ ಅಲ್ಪಸ್ವಲ್ಪ ಹಣ ಕಸಿದು ಅವರಿಬ್ಬರನ್ನು ಅದೇ ಲಾಡ್ಜ್ನ ಕೊಠಡಿಯಲ್ಲೇ ಕೂಡಿ ಹಾಕಿ ಹೋಗಿದ್ದಾರೆ. ಆದರೆ, ಹೇಗೋ, ಚೌಧರಿ ತನ್ನ ಮತ್ತೂಬ್ಬ ಸ್ನೇಹಿತನನ್ನು ಸಂಪರ್ಕಿಸಿ ಪರಿಸ್ಥಿತಿ ತಿಳಿಸಿದಾಗ, ಆ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿ ಬಂಧಿತರನ್ನು ಬಚಾವ್ ಮಾಡಿದರಲ್ಲದೆ ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಒಬ್ಬ ಪೊಲೀಸ್ ಇಲಾಖೆಯಲ್ಲಿ ಚಾಲಕ ಎಂದು ಹೇಳಲಾಗಿದೆ.
Comments are closed.