ನವದೆಹಲಿ: ಕಳೆದ 2 ವರ್ಷಗಳಲ್ಲಿ 2.53 ಲಕ್ಷ ಕೇಂದ್ರ ಸರ್ಕಾರಿ ನೌಕರಿ ಸೃಷ್ಟಿಯಾಗಿದೆ ಎಂದು 2018-19 ನೇ ಸಾಲಿನ ಬಜೆಟ್ ಮೂಲಕ ತಿಳಿದುಬಂದಿದೆ.
ಬಜೆಟ್ ವಿವರಣೆಯ ಪ್ರಕಾರ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಮಾ.1, 2018 ರ ವೇಳೆಗೆ 35.05 ಲಕ್ಷದಷ್ಟಿರಲಿದೆ ಎಂದು ತಿಳಿದುಬಂದಿದೆ. 2016 ರಲ್ಲಿ 32.52 ಲಕ್ಷದಷ್ಟಿದ್ದ ಉದ್ಯೋಗಿಗಳ ಸಂಖ್ಯೆ ಎರಡು ವರ್ಷಗಳಲ್ಲಿ 2.53 ಲಕ್ಷ ಹೆಚ್ಚಾಗಿದೆ.
2016-17 ರ ಅವಧಿಯಲ್ಲಿ ಕೇಂದ್ರ ಸರ್ಕಾರಿ ಇಲಾಖೆಗೆಳಲ್ಲಿ ಒಟ್ಟು 2.27 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ. ಅತಿ ಹೆಚ್ಚು ಉದ್ಯೋಗಗಳು ಪೊಲೀಸ್ ಇಲಾಖೆಯಲ್ಲಿ ಸೃಷ್ಟಿಯಾಗಿದ್ದು, 2016 ರಲ್ಲಿ 3,996 ರಷ್ಟಿದ್ದ ರೈತ ಕಲ್ಯಾಣ ಹಾಗೂ ಕೃಷಿ ಸಹಕಾರ ಇಲಾಖೆಯಲ್ಲಿ ಮಾ.1 ರ ವೇಳೆಗೆ 1,944 ಉದ್ಯೋಗಗಳು ಸೇರ್ಪಡೆಯಾಗಲಿವೆ.
Comments are closed.