ರಾಷ್ಟ್ರೀಯ

ಅಯೋಧ್ಯೆ ವಿವಾದ ಕೋರ್ಟ್‌ನಲ್ಲಿ ಬಗೆಹರಿಯಲಾರದು: ಶ್ರೀ ಶ್ರೀ

Pinterest LinkedIn Tumblr


ಹೊಸದಿಲ್ಲಿ : ರಾಮ ಜನ್ಮಭೂಮಿ – ಬಾಬರಿ ಮಸೀದಿ ಅಯೋಧ್ಯಾ ವಿವಾದ ಕೋರ್ಟಿನಲ್ಲಿ ಬಗೆಹರಿಯಲಾದು ಎಂದು ಆಧ್ಯಾತ್ಮಿಕ ಗುರು, ಆರ್ಟ್‌ ಆಫ್ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಹೇಳಿದ್ದಾರೆ.

ಕೋರ್ಟಿನಲ್ಲಿ ಸೋಲುವ ಪಕ್ಷವು ಮೊದಲಲ್ಲಿ ತೀರ್ಪನ್ನು ಸ್ವೀಕರಿಸುವುದಾದರೂ ಅನಂತರದಲ್ಲಿ ಅದು ಪುನಃ ಗುಲ್ಲೆಬ್ಬಿಸುತ್ತದೆ ಎಂದವರು ಹೇಳಿದರು.

ಅಯೋಧ್ಯೆ ವಿವಾದಕ್ಕೆ ಕೋರ್ಟ್‌ ಹೊರಗೆ ಸೌಹಾರ್ದಯುತ ಪರಿಹಾರವನ್ನು ಕಾಣುವುದೇ ಉತ್ತಮ ಉಪಾಯ ಎಂದಿರುವ ಶ್ರೀ ಶ್ರೀ, “ಪ್ರತಿಯೊಬ್ಬರಿಗೂ ತಮ್ಮ ಜ್ಞಾನದ ಕೊರತೆಯನ್ನು ಪ್ರದರ್ಶಿಸುವ ಹಕ್ಕಿದೆ’ ಎಂದು ಹೇಳುವ ಮೂಲಕ ತಮ್ಮ ಟೀಕಾಕಾರಿಗೆ ಟಾಂಗ್‌ ನೀಡಿದರು.

ಆಯೋಧ್ಯೆ ವಿವಾದಕ್ಕೆ ಕೋರ್ಟ್‌ ಹೊರಗೆ ಸೌಹಾರ್ದಯುತ ಪರಿಹಾರವನ್ನು ಕಾಣುವ ಶ್ರೀ ಶ್ರೀ ಅವರ ಯತ್ನಕ್ಕೆ ವಿವಿಧೆಡೆಗಳಿಂದ ವಿರೋಧ ವ್ಯಕ್ತವಾಗಿತ್ತು.

ಆಯೋಧ್ಯೆ ವಿವಾದದಿಂದ ದೂರ ಇರುವಂತೆ ಬಾಬರಿ ಕ್ರಿಯಾ ಸಮಿತಿಯು ಶ್ರೀ ಶ್ರೀ ಅವರನ್ನು ಕೇಳಿಕೊಂಡಿತ್ತಾದರೆ ರಾಜಿ ಪಂಚಾಯ್ತಿಕೆಯಲ್ಲಿ ಮಧ್ಯಸ್ಥಿಕೆ ವಹಿಸುವುದಕ್ಕೆ ಕೆಲವು ರಾಜಕಾರಣಿಗಳು ನಿರಾಕರಿಸಿದ್ದರು.

-ಉದಯವಾಣಿ

Comments are closed.