ರಾಷ್ಟ್ರೀಯ

ರಂಗಿನೋಕುಳಿ: ನಮಾಜ್‌ ಸಮಯ ಬದಲಿಸಿದ ಮುಸ್ಲಿಂ ಧರ್ಮಗುರುಗಳು

Pinterest LinkedIn Tumblr


ಲಖನೌ: ಮಾರ್ಚ್ 2ರಂದು ನಡೆಯಲಿರುವ ಹೋಳಿ ಹಬ್ಬದ ಅಂಗವಾಗಿ ಶಕ್ರವಾರದ ನಮಾಜ್ ಸಮಯವನ್ನು ಮುಸ್ಲಿಂ ಧರ್ಮಗುರುಗಳು ಮುಂದೂಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.

ಅಸಫಿ (ಬಾದಾ) ಇಮಾಂಬರಾದಲ್ಲಿ ನಡೆಯುವ ಶುಕ್ರವಾರದ ನಮಾಜ್‌ ಸಮಯವನ್ನು ಶಿಯಾ ಧರ್ಮ ಗುರುಗಳಾದ ಮೌಲಾನಾ ಕಲ್ಬೆ ಜವಾದ್ ಅವರು 30 ನಿಮಿಷಗಳ ಕಾಲ ಮುಂದೂಡಿದ್ದಾರೆ.

ಮಧ್ಯಾಹ್ನದ ವೇಳೆ ಬಣ್ಣದೋಕುಳಿ ಆಡುವ ಹಿಂದೂ ಬಾಂಧವರಿಗೆ ತೊಂದರೆಯಾಗಬಾರದು ಎಂದು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೌಲಾನಾ ಕಲ್ಬೆ ಜವಾದ್ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ 12-1 ಗಂಟೆಯವರೆಗೆ ನಡೆಯುವ ಶುಕ್ರವಾರದ ನಮಾಜ್ ಸಮಯವನ್ನು 12.45 ರಿಂದ 1.45ಕ್ಕೆ ಮುಂದೂಡಲಾಗಿದೆ.

ಸಂಭ್ರಮದ ಹೋಳಿ ಆಚರಿಸಲು ಮಧ್ಯಾಹ್ನ 12 ಗಂಟೆಯವರೆಗೂ ಅವಕಾಶವಿರುತ್ತದೆ. ಆದರೆ, ನಿಗದಿತ ಸಮಯ ಮೀರುವುದು ಸರ್ವೆಸಾಮಾನ್ಯ. ಉಭಯ ಸಮುದಾಯಗಳ ನಡುವಿನ ಕೋಮ ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮಾಜ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೌಲಾನಾ ತಿಳಿಸಿದ್ದಾರೆ.

ಕಳೆದ ವರ್ಷ ಹಿಂದುಗಳು ಜಗನ್ನಾಥ್ ಯಾತ್ರೆಯನ್ನು ಮುಂದೂಡಿದ್ದರು: ಮುಸ್ಲಿಂ ಧರ್ಮ ಗುರು

ಮುಸ್ಲಿಂ ಹಬ್ಬವನ್ನು ಗೌರವಿಸಲು ಹಿಂದೂಗಳು ಕಳೆದ ವರ್ಷ ಈದ್ಗಾ ಪ್ರದೇಶದ ಮೂಲಕ ಹಾದುಹೋಗುವ ಜಗನ್ನಾಥ ಯಾತ್ರೆಯನ್ನು ಎರಡು ಗಂಟೆಗಳ ಕಾಲ ಮುಂದೂಡುವ ಮೂಲಕ ಸೌಹಾರ್ದತೆ ಮೆರೆದಿದ್ದರು.

Comments are closed.