ರಾಷ್ಟ್ರೀಯ

ಟೊಳ್ಳು ಭರವಸೆ ನೀಡುವ ಪ್ರಧಾನಿ ಮೋದಿ: ಸೋನಿಯಾ ಟೀಕೆ

Pinterest LinkedIn Tumblr


ಹೊಸದಿಲ್ಲಿ: “2014ರ ಮಹಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು “ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮತ್ತು ಎಲ್ಲರನ್ನೂ ಒಳಗೊಳಿಸುವ ಅಭಿವೃದ್ದಿಯನ್ನು ಸಾಧಿಸುವುದಾಗಿ ನೀಡಿದ್ದ ಭರವಸೆಗಳು ಕೇವಲ ಡ್ರಾಮಾಬಾಜಿಯಾಗಿದ್ದು ಅದು ಕೇವಲ ಅಧಿಕಾರವನ್ನು ಕಬಳಿಸಲು ಮಾಡಿದ್ದ ಕುತಂತ್ರವಾಗಿದೆ’ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

84ನೇ ಕಾಂಗ್ರೆಸ್‌ ಪೂರ್ಣಾಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು “ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುಲ್ಲಿ ಕಾರ್ಯಕರ್ತರು ಎಲ್ಲ ರೀತಿಯ ತ್ಯಾಗ ಮಾಡುವುದಕ್ಕೆ ಸಿದ್ಧರಾಗಬೇಕಾಗಿದೆ ಮತ್ತು ಆ ಮೂಲಕ ದೇಶವನ್ನು ತಾರತಮ್ಯ, ದ್ವೇಷದ ರಾಜಕಾರಣ ಮತ್ತು ದುರಹಂಕಾರದಿಂದ ಮುಕ್ತಗೊಳಿಸುವುದಕ್ಕೆ ಶ್ರಮಿಸಬೇಕು’ ಎಂದು ಕರೆ ನೀಡಿದರು.

ಈಗಿನ ಸರಕಾರದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್‌ ಕಾರ್ಯಕರ್ತರು ಶಕ್ತಿಯುತ ಹೋರಾಟ ಮಾಡಬೇಕು ಮತ್ತು ಆ ಮೂಲಕ ಈಗ ಕಂಡುಬರುತ್ತಿರುವ ಅಧಿಕಾರದ ಭಯದಿಂದ ದೇಶವನ್ನು ಮುಕ್ತಗೊಳಿಸಬೇಕು ಎಂದು ಸೋನಿಯಾ ಕರೆ ನೀಡಿದರು.

-ಉದಯವಾಣಿ

Comments are closed.