ದೆಹಲಿ: ಅಧ್ಯಕ್ಷರಾಗಿ ಪಕ್ಷದ ಚುಕ್ಕಾಣಿ ಹಿಡಿದ ಬಾರಿಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ ಪ್ಲೀನರಿ ಸಭೆ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಇದೇ ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಗೆ ತಡೆಯೊಡ್ಡುವುದಾಗಿ ರಾಹುಲ್ ಶಪಥಗೈದಿದ್ದಾರೆ.
ಪಕ್ಷದ ಮುಂದಿನ ಹಾದಿ ಕುರಿತಂತೆ ಮಾತನಾಡಿದ ರಾಹುಲ್ ಪಕ್ಷದ ಚಿಹ್ನೆ ತೋರಿಸಿ ಮತನಾಡುತ್ತಾ “ರಾಷ್ಟ್ರವನ್ನು ಒಗ್ಗೂಡಿಸಿ ಮುಂದೆ ಕೊಂಡೊಯ್ಯುವ ಏಕೈಕ ಚಿಹ್ನೆ ಇದಾಗಿದೆ. ರೊಸತ್ತು ಬೇರೆ ಹಾದಿ ನೋಡುತ್ತಿರುವ ದೇಶಕ್ಕೆ ಮುಂದಿನ ಹಾದಿ ತೋರಿಸಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ” ಎಂದಿದ್ದಾರೆ.
ಇದೇ ವೇಳೆ ಕೇಂದ್ರದ ಸರಕಾರದ ವಿರುದ್ಧ ಹರಿಹಾಯದ ರಾಹುಲ್ “ಬಿಜೆಪಿ ಕೋಪವನ್ನು ಬಳಸುತ್ತದೆ. ನಾವು ಪ್ರೇಮದಿಂದ ಜನರನ್ನು ಕಾಣುತ್ತೇವೆ. ಆದರೆ ಈ ದೇಶ ಪ್ರತಿಯೊಬ್ಬರಿಗೂ ಸೇರುತ್ತದೆ ಹಾಗು ಕಾಂಗ್ರೆಸ್ ಮಾಡುವ ಪ್ರತಿಯೊಂದು ಕೆಲಸವೂ ಪ್ರತಿಯೊಬ್ಬರ ಒಳಿತಿಗೇ ಆಗಿದೆ” ಎಂದು ಹೇಳಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಸಭೆ ಉದ್ದೇಶಿಸಿ ಸೋನಿಯಾ ಗಾಂಧಿ ಕೂಡ ಮಾತನಾಡಲಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್‌ನ ಎಲ್ಲ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗು ಎಲ್ಲ ರಾಜ್ಯಗಳ ನಾಯಕರು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೂಡ ಸಭೆಯಲ್ಲಿ ಭಾಗವಹಿಸಿದ್ದಾರೆ.
ಬಿಜೆಪಿಯನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳು ಒದೆಡೆ ಸೇರುತ್ತಿರುವ ನಡುವೆಯೇ ವಾರಾಂತ್ಯಕ್ಕೆ ಕಾಂಗ್ರಸ್ ಪ್ಲೀನರಿ ಸಭೆ ಆಯೋಜಿಸಲಾಗಿದೆ.
Comments are closed.