ಹಲಿ: ಇತ್ತೀಚಗೆ ನಡೆದ ಗೋರಖ್ಪುರ ಹಾಗು ಫುಲ್ಪುರ ಉಪಚುನಾವಣೆ ತಮ್ಮ ಪಕ್ಷದ ಗೆಲುವಿನ ಬಳಿಕ ಅಖಿಲೇಶ್ ಯಾದವ್ ಬಿಎಸ್‌ಪಿಯೊಂದಿಗೆ ತಮ್ಮ ಮೈತ್ರಿ ಮುಂದುವರೆಸುವ ಇರಾದೆ ವ್ಯಕ್ತ ಪಡಿಸಿದ್ದಾರೆ.
ಮಾಯಾವತಿರ ಬಿಎಸ್‌ಪಿ ಬೆಂಬಲ ಪಡೆದ ಎಸ್‌ಪಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಅಜೇಯ ಓಟಕ್ಕೆ ಕಡಿವಾಣ ಹಾಕಿದ್ದಾರೆ.
ಮಾಯಾವತಿಯೊಂದಿಗೆ ಮೈತ್ರಿ ಕುರಿತಂತೆ ಮತನಾಡಿದ ಅಖಿಲೇಶ್ “ಅವರನ್ನು ನಾನು ಯಾವಾಗಲೂ ಬಹಳ ಗೌರವದಿಂದ ಕಂಡಿದ್ದೇನೆ. ಮಾಯಾವತಿರೊಂದಿಗೆ ಮೈತ್ರಿ ಕಾಪಾಡಿಕೊಳ್ಳಲು ಎಲ್ಲ ಮಂದಿರಗಳು ಹಾಗು ಮಸೀದಿಗಳನ್ನು ಸಂದರ್ಶಿಸಲಿದ್ದೇವೆ” ಎಂದು ಅಖಿಲೇಶ್ ಹೇಳಿದ್ದಾರೆ.
ಆಡಳಿತಾರೂಢ ಸರಕಾರದ ಮೇಲೆ ಹರಿಹಾಯ್ದ ಅಖಿಲೇಶ್ “ಬಿಜೆಪಿ ತಮಗೆ ಏನು ಮಾಡಿದೆ ಎಂದು ಜನರು ಬಿಜೆಪಿಯನ್ನು ಕೇಳುತ್ತಿದ್ದಾರೆ. ನೋಟು ನಿಷೇಧವೇ ಇರಲಿ, ಜಿಎಸ್‌ಟಿ ಜಾರಿಯೇ ಇರಲಿ, ಬಿಜೆಪಿ ಜನರಿಗೆ ಏನನ್ನೂ ಮಾಡಿಲ್ಲ” ಎಂದು ಅಖಿಲೇಶ್ ತಿಳಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ “ನಾಣು ಉತ್ತರ ಪ್ರದೇಶದಲ್ಲಿ ಖುಷಿಯಾಗಿದ್ದೇನೆ, ದೆಹಲಿಗೆ ಕಳುಹಿಸಬೇಡಿ. ನನಗೆ ದೊಡ್ಡ ಆಸೆಗಳಿಲ್ಲ, ನನಗೇನಿದ್ದರೂ ಅಭಿವೃದ್ಧಿಯ ದೊಡ್ಡ ಆಸೆಗಳಿವೆ” ಎಂದು ಹೇಳಿದ್ದಾರೆ.
Comments are closed.