ನವದೆಹಲಿ: ಸೆಕ್ಸ್ ಗೆ ನಿರಾಕರಿಸಿದ್ದ ಎಂಬ ಕಾರಣಕ್ಕೆ 10 ವರ್ಷದ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ್ದ ಕಾಮುಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
4ನೇ ತರಗತಿಯಲ್ಲಿ ಓದುತ್ತಿದ್ದ ಆಕಾಶ್ ಕುಮಾರ್ ಜಾ ಕೊಲೆಯಾದ ವಿದ್ಯಾರ್ಥಿ. 25 ವರ್ಷದ ಅಮರನಾಥ್ ಬಂಧಿತ ಆರೋಪಿ. ಫೆಬ್ರವರಿ 28ರಂದು ಶಾಲೆಗೆ ತೆರಳಿದ್ದ ಆಕಾಶ್ ಸಂಜೆಯಿಂದ ಕಾಣೆಯಾಗಿದ್ದನು. ಫೆಬ್ರವರಿ 28ರಂದು ತಾಯಿಯೊಂದಿಗೆ ಆಕಾಶ್ ಶಾಲೆಗೆ ತೆರಳಿದ್ದು ರಸ್ತೆ ಬದಿ ಅಂಗಡಿಗಳ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆಕಾಶ್ ನನ್ನು ಶಾಲೆಯಿಂದ ಕರೆದುಕೊಂಡು ಹೋಗಲು ತಾಯಿ ಅಂದು ತಡ ಮಾಡಿದ್ದರು. ಶಾಲೆಗೆ ಬಂದ ಮೇಲೆ ಆಕಾಶ್ ಎಲ್ಲಿಯೂ ಕಾಣುತ್ತಿರಲಿಲ್ಲ. ಆತನ ಗೆಳೆಯರು ಅಪರಿಚಿತ ವ್ಯಕ್ತಿಯೊಬ್ಬನಿಗೆ ಗುಟಕಾ ತರಲು ಹೋದನು ಅಂತಾ ಹೇಳಿದ್ದರು.
ಅಪರಿಚಿತ ವ್ಯಕ್ತಿಯೊಂದಿಗೆ ಗುಟಕಾ ತರಲು ಮಗನನ್ನು ಪೋಷಕರು ಹುಡುಕಾಡಿದ್ದರು. ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿದ್ದಾನೆ ಅಂತಾ ದೂರು ಸಹ ದಾಖಲಿಸಿದ್ದರು. ಮಾರ್ಚ್ 04ರಂದು ದಕ್ಷಿಣ ದೆಹಲಿ ಜೈತಪುರ ಬಡಾವಣೆಯ ಆಗ್ರಾ ಕಾಲುವೆಯಲ್ಲಿ ಆಕಾಶ್ ಮೃತ ದೇಹ ಪತ್ತೆಯಾಗಿತ್ತು. ಹರಿತವಾದ ವಸ್ತುವಿನಿಂದ ಆಕಾಶನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.
ಆರೋಪಿ ಸಿಕ್ಕಿದ್ದು ಹೇಗೆ?: ಕಾಣೆಯಾದ ದಿನದಂದು ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಮಾತನಾಡುತ್ತಿದ್ದ ಮತ್ತು ಅವನಿಗಾಗಿ ಗುಟಕಾ ತರಲು ಆತ ಹೋಗಿದ್ದ ಎಂಬ ವಿಷಯವನ್ನು ಆಕಾಶ್ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದನು. ಆಕಾಶ್ ಸ್ನೇಹಿತನ ಹೇಳಿಕೆಯ ಆಧಾರದ ಮೇಲೆ ಆರೋಪಿಯ ಸ್ಕೆಚ್ ತಯಾರಿಸಲಾಗಿತ್ತು. ಸ್ಕೆಚ್ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದ ನಶೆಯಲ್ಲಿ ಬಾಲಕನೊಂದಿಗೆ ಸ್ನೇಹ ಬೆಳಸಿಕೊಂಡಿದ್ದೆ, ಇದೇ ವೇಳೆ ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಸಹ ಮುಂದಾಗಿದ್ದೆ. ಆದ್ರೆ ಬಾಲಕ ವಿರೋಧ ವ್ಯಕ್ತಪಡಿಸಿ, ತನ್ನ ಪೋಷಕರಿಗೆ ವಿಷಯವನ್ನು ತಿಳಿಸುವುದಾಗಿ ಅಂತಾ ಹೇಳಿದ್ದನು. ಇದ್ರಿಂದ ಭಯಗೊಂಡು ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಅಂತಾ ಆರೋಪಿ ಅಮರನಾಥ್ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.
Comments are closed.