ಕೊಯಮತ್ತೂರ್(ತಮಿಳುನಾಡು): ತಮಿಳುನಾಡು ಕೊಯಮತ್ತೂರಿನ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳ ಕಾರ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಹಾನಿಗೊಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಸಿ.ಆರ್ ನಂದಕುಮಾರ್ ರಾಮಲಕ್ಷ್ಮೀ ಬಡಾವಣೆಯಲ್ಲಿರುವ ತಮ್ಮ ನಿವಾಸದ ಎದುರು ನಿಲ್ಲಿಸಿದ್ದ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಬಾಂಬ್ ದಾಳಿಯಿಂದ ಕಾರು ಹಾನಿಗೊಂಡಿದ್ದು ಘಟನೆ ಕುರಿತಂತೆ ಬಿಜೆಪಿ ನಾಯಕರು ಸಿಂಗನಲ್ಲೂರು ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದ್ರಾವಿಡ ಚಳವಳಿಯ ಐಕಾನ್ ಪೆರಿಯಾರ್ ಪ್ರತಿಮೆ ದ್ವಂಸ ಘಟನೆ ನಡೆದ ಬಳಿಕ ಈ ಬಾಂಬ್ ದಾಳಿ ನಡೆದಿದೆ.
ಮಾರ್ಚ್ 7 ರಂದು ಕೊಯಮತ್ತೂರ್ ನ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಛೇರಿಯ ಮುಂದೆ ಎರಡು ಪೆಟ್ರೋಲ್ ಬಾಂಬ್ ಸ್ಪೋಟ ಸಂಭವಿಸಿತ್ತು
Comments are closed.