ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂಗೆ ಶುಕ್ರವಾರ ದೆಹಲಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
10 ಲಕ್ಷ ಶ್ಯೂರಿಟಿ ಬಾಂಡ್ ಇರಿಸಿಕೊಂಡು ಜಾಮೀನು ನೀಡಿರುವ ಕೋರ್ಟ್ ಯಾವುದೇ ಕಾರಣಕ್ಕೂ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ , ಸಾಕ್ಷಿಗಳು ಅಥವಾ ಬ್ಯಾಂಕ್ ಖಾತೆಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಎನ್ನುವ ಷರತ್ತು ವಿಧಿಸಿದೆ.
ಫೆಬ್ರವರಿ 28 ರಂದು ಕಾರ್ತಿಯನ್ನು ಚೆನ್ನೈನಲ್ಲಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
-ಉದಯವಾಣಿ
Comments are closed.