ರಾಷ್ಟ್ರೀಯ

ಉತ್ತರಪ್ರದೇಶ: 24 ಗಂಟೆಯಲ್ಲಿ ಮೂವರು ಮೋಸ್ಟ್ ವಾಟೆಂಡ್ ಕ್ರಿಮಿನಲ್ ಹತ್ಯೆ, ಆರು ಬಂಧನ

Pinterest LinkedIn Tumblr

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದಂತೆ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ವಿರುದ್ಧ ಎನ್ ಕೌಂಟರ್ ನಡೆಸುತ್ತಿದ್ದು ಕಳೆದ 24 ಗಂಟೆಯಲ್ಲಿ ನಡೆದ ಏಳು ಎನ್ಕೌಂಟರ್ ನಲ್ಲಿ ಮೂವರು ಕ್ರಿಮಿನಲ್ ಗಳ ಹತ್ಯೆ ಮಾಡಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದ ಶಹರಾನ್ಪುರ, ಘಜಿಯಾಬಾದ್, ಗೌತಮ್ ಬುದ್ದ ನಗರ ಮತ್ತು ಮುಜಾಫರ್ ನಗರಗಳಲ್ಲಿ ಎನ್ ಕೌಂಟರ್ ಗಳು ನಡೆದಿದ್ದು ಇದರಲ್ಲಿ ಮೂವರ ಹತ್ಯೆ ಮಾಡಲಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಐಜಿ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿರುವ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂದಾಗಿದ್ದು ಇಲ್ಲಿಯವರೆಗೂ ಎನ್ಕೌಂಟರ್ ನಲ್ಲಿ ಹಲವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಹತ್ಯೆಯಾಗಿದ್ದು ಇನ್ನುಳಿದವರು ಊರನ್ನೇ ಬಿಟ್ಟಿದ್ದಾರೆ.

Comments are closed.