ರಾಷ್ಟ್ರೀಯ

ಹೊತ್ತಿ ಉರಿಯುತ್ತಿದ್ದ ಟ್ರಕ್ಕನ್ನು ಪೆಟ್ರೋಲ್ ಪಂಪ್ ನಿಂದ ದೂರಕ್ಕೆ ಚಲಾಯಿಸಿ ಹಲವರ ಪ್ರಾಣ ಉಳಿಸಿದ ಚಾಲಕ !

Pinterest LinkedIn Tumblr

ನರಸಿಂಗ್ ಪುರ್ : ಮಧ್ಯಪ್ರದೇಶದ ನರಸಿಂಗ್ ಪುರದಲ್ಲಿ ಪ್ರಚಂಡ ಧೈರ್ಯದ ಚಾಲಕನೊಬ್ಬ ಹೊತ್ತಿ ಉರಿಯುತ್ತಿದ್ದ ಟ್ರಕ್ ನ್ನು ಪೆಟ್ರೋಲ್ ಪಂಪ್ ನಿಂದ ದೂರ ಚಲಾಯಿಸಿ ಜೀವ ಉಳಿಸಿಕೊಂಡಿದ್ದಾನೆ.

ಜೊತೆಗೆ ಈ ಮೂಲಕ ಆಗಬಹುದಾದ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದು, ಹಲವರ ಜೀವ ಉಳಿಸಿದ್ದಾನೆ.

ಪೆಟ್ರೋಲ್ ಪಂಪ್ ಬಳಿ ನಿನ್ನೆ ರಾತ್ರಿ ಪೆಟ್ರೋಲ್ ಖಾಲಿ ಮಾಡುತ್ತಿರುವಾಗ ಟ್ರಕ್ ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಕೊಂಡಿದೆ.

ಇದರಿಂದ ಆತಂಕಗೊಂಡ ಚಾಲಕ ಟ್ರಕ್ ನ್ನು ಹಾಗೆಯೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಟ್ರಕ್ ಧಗಧಗನೆ ಹೊತ್ತಿ ಉರಿಯುತ್ತಿದ್ದರೂ ಪೆಟ್ರೋಲ್ ಪಂಪ್ ನಿಂದ ದೂರದವರೆಗೂ ಚಲಾಯಿಸಿಕೊಂಡೇ ಹೋಗಿದ್ದು, ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಟ್ರಕ್ ಚಾಲಕನಿಗೆ ಸುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.