ಡಿಸ್ಪುರ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು. ಇದ ರಿಂದ ಅತ್ಯಾಚಾರ ತಡೆಯಲು ಸಾಧ್ಯ, ಅದಕ್ಕಾಗಿ ಶೂಟಿಂಗ್ ಪಡೆ ರಚಿಸಬೇಕು ಎಂದು ಅಸ್ಸಾಂನ ತೇಜ್‌ಪುರ್ ಲೋಕಸಭಾ ಕ್ಷೇತ್ರದ ಸಂಸದ ರಾಮ್ ಪ್ರಸಾದ್ ಶರ್ಮಿ ಹೇಳಿದ್ದಾರೆ.
ಅತ್ಯಾಚಾರಗಳಂಥ ಅಪರಾಧಗಳನ್ನು ತಡೆಯಲು ಇದೇ ಸೂಕ್ತ ಕ್ರಮ. ಇದರಿಂದ ಅಪರಾಧಗಳನ್ನು ನಿಯಂತ್ರಿಸಬಹುದು. ಮಹಿಳೆಯರಿಗೆ ಕಿರುಕುಳ ನೀಡುವವ ರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ವಕೀಲರೂ ಆಗಿರುವ ಶರ್ಮ ಹೇಳಿದ್ದಾರೆ. ಸಂಸದರಾಗುವುದಕ್ಕಿಂತ ಮುಂಚೆ ಅವರು ಗುಹವಾಟಿ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಸ್ಸಾಂನಲ್ಲಿ ಕಳೆದೆರಡು ವರ್ಷಗಳಿಂದ ಮಹಿಳೆಯರ ಮೇಲೆ ದೌರ್ಜನ್ಯ ಅವ್ಯಾ ಹತವಾಗಿ ಏರಿಕೆಯಾಗಿದ್ದು, ಭಾನುವಾರ ಅಸ್ಸಾಂನ ನಗಾನ್‌ನಲ್ಲಿ ಐದು ಹೆಣ್ಮಕ್ಕಳ ಮೇಲೆ ಅತ್ಯಾಚಾರವೆಸಗಿ ಜೀವಂತ ಸುಟ್ಟು ಹಾಕಲಾಗಿತ್ತು. ಸಾಯುವುದಕ್ಕಿಂತ ಮುಂಚೆ ನಾಲ್ಕು ಮಂದಿ ಆರೋಪಿಗಳಲ್ಲಿ, ಮೂವರ ಹೆಸರನ್ನು ಬಾಲಕಿಯೊಬ್ಬಳು ಹೇಳಿದ್ದಳು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣ ಅಸ್ಸಾಂ ವಿಧಾನ ಸಭೆಯಲ್ಲಿ ಭಾರೀ ಕೋಲಾಹಲ ವೆಬ್ಬಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾ ಡುವುದಕ್ಕೆ ಸರಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.
Comments are closed.