ಲಕ್ನೋ: ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ತಿಗೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರ ಪ್ರದೇಶದ ರಾಮ್ಪುರದಲ್ಲಿ ನಡೆದಿದೆ.
ಆರೋಪಿ ಮೈದುನ ಕಿರುಕುಳ ನೀಡುತ್ತಿದ್ದ ವಿಡಿಯೋವನ್ನೂ ಸಂತ್ರಸ್ತೆ ರೆಕಾರ್ಡ್ ಮಾಡಿ ಪೊಲೀಸರಿಗೆ ಸಾಕ್ಷಿಗಾಗಿ ನೀಡಿದ್ದಾರೆ. ಪೊಲೀಸರು ಸಾಕ್ಷಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸಂತ್ರಸ್ತೆಯ ಪತಿ ಒಂದು ವರ್ಷದ ಹಿಂದೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು. ಈ ವೇಳೆ ಮೈದುನ ಸಂತ್ರಸ್ತೆಗೆ ಮದುವೆಯಾಗುದಾಗಿ ಮಾತು ಕೊಟ್ಟಿದ್ದಾನೆ. ನಂತರ ಮದುವೆ ಹೆಸರಿನಲ್ಲಿ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದಾನೆ.
ಸಂತ್ರಸ್ತೆ ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡಿದ್ರೆ, ನೆಪ ಹೇಳಿ ಆರೋಪಿ ಮದುವೆಯನ್ನು ಮುಂದೂಡುತ್ತಿದ್ದನು. ಈ ವೇಳೆ ಸಂತ್ರಸ್ತೆ ಆತ ಕಿರುಕುಳ ನೀಡುತ್ತಿದ್ದ ವಿಡಿಯೋವನ್ನು ಮಾಡಿದ್ದಾರೆ. ನಂತರ ಅದನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿ ಮೈದುನನ್ನು ಬಂಧಿಸಿದ್ದಾರೆ.
Comments are closed.