ದೆಹಲಿ: ಇನ್ನುಮುಂದೆ ಸೌದಿ ಅರೇಬಿಯಾಕ್ಕೆ ಬಂದಿಳಿಯುವ ವಿಮಾನ ಸಿಬ್ಬಂದಿಗಳ ಪಾಸ್‌ಪೋರ್ಟ್ ತಾತ್ಕಾಲಿಕವಾಗಿ ಇಟ್ಟುಕೊಳ್ಳುವುದಿಲ್ಲ, ಅದರ ಬದಲಾಗಿ ಬಾರ್ ಕೋಡ್ ನೀಡಲಿದೆ ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ಸ್ಪಷ್ಟ ಪಡಿಸಿದ್ದಾರೆ.
ಸೌದಿ ಸರಕಾರದ ಈ ಹೊಸ ನಿಯಮ ಏರ್ ಹಾಗೂ ಜೆಟ್ ಏರ್‌ವೇಸ್ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಈ ನಿಯಮದ ಬಗ್ಗೆ ಸೌದಿ ಸರಕಾರದೊಂದಿಗೆ ಭಾರತೀಯ ಅಧಿಕಾರಿಗಳು ಮಾತುಕತೆ ನಡೆಸಿದ್ದರು. ಇದರ ಫಲವಾಗಿ ಸೌದಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಬದಲಾಗಿ ಸೀಮಿತ ಅವಧಿಯ ಬಾರ್‌ಕೋಡ್ ನೀಡಲಾಗುತ್ತದೆ. ಫೆಬ್ರವರಿ ಮಧ್ಯದಿಂದಲೇ ಈ ನಿಯಮ ಜಾರಿಗೆ ಬಂದಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ಈ ಮೊದಲು ಸೌದಿ ಅರೇಬಿಯಾಗೆ ಬಂದಿಳಿಯುವ ವಿಮಾನ ಸಿಬ್ಬಂದಿಗಳ ಪಾಸ್‌ಪೋರ್ಟ್‌ನ್ನು ತಾತ್ಕಾಲಿಕವಾಗಿ ಇಟ್ಟುಕೊಂಡು ಮರಳಿ ಹಿಂದಿರುಗಿಸುತ್ತಿತ್ತು. ಇದರಿಂದ ಸಿಬ್ಬಂದಿಗಳಿಗೆ ಏರ್‌ಪೋರ್ಟ್‌ನಲ್ಲಿ ಭಾರಿ ತೊಂದರೆಯುಂಟಾಗುತ್ತಿತ್ತು. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಮೂಲ ಪಾಸ್‌ಪೋರ್ಟ್ ಬದಲಾಗಿ ನಕಲು ಪ್ರತಿ ತೋರಿಸಿದ್ದಾಕ್ಕಾಗಿ ವಿಮಾನ ಸಿಬ್ಬಂದಿಗಳನ್ನು ಜಿದ್ದಾ ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಸೌದಿ ಅರೇಬಿಯಾಕ್ಕೆ ಬಂದಿಳಿದ ವಿಮಾನ ಸಿಬ್ಬಂದಿಗಳು ತಮ್ಮ ಪಾಸ್‌ಪೋರ್ಟ ಅನ್ನು ಜಿದ್ದಾದಲ್ಲಿರುವ ಎಮಿಗ್ರೇಶನ್ ಕಚೇರಿಯಲ್ಲಿ ಕೊಟ್ಟು, ವಿಮಾನ ಸಿಬ್ಬಂದಿಗಳ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಿತ್ತು. ಸೌದಿಯಲ್ಲಿರುವಷ್ಟು ದಿನ ಅದರ ನಕಲು ಪ್ರತಿ ಸಿಬ್ಬಂದಿಗಳ ಬಳಿ ಇರುವುದು ಕಡ್ಡಾಯವಾಗಿತ್ತು. ಈ ಹೊಸ ನೀತಿ ಬಂದಿದ್ದರಿಂದ ಸಿಬ್ಬಂದಿಗಳಿದ್ದ ಬವಣೆ ತಪ್ಪಿದೆ.
Comments are closed.