ಮೀರತ್: ಟಿವಿಯಲ್ಲಿ ಕ್ರೈಂ ಸಂಬಂಧಿತ ಕಾರ್ಯಕ್ರಮ ನೋಡಿ ಅದನ್ನು ಅನುಸರಿಲು ಹೋಗಿ 8 ವರ್ಷದ ಬಾಲಕಿ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶ ಹಾಪುರ್‌ನಲ್ಲಿ ನಡೆದಿದೆ. ಈ ಘಟನೆ ನಡೆಯುವಾಗ ಆಕೆಯ ಸ್ನೇಹಿತರು ಜತೆಯಲ್ಲಿಯೇ ಇದ್ದರು.
ಬಾಲಕಿ ಸಿಮ್ರಾನ್ ತಂದೆ ಯಾವುದೋ ಕಾರಣಕ್ಕೆ ಸಿಟ್ಟಿನಲ್ಲಿ ಮಗಳಿಗೆ ಎರಡು ಪೆಟ್ಟು ನೀಡಿದ್ದಾನೆ. ನಂತರ ಬಾಲಕಿ ಸ್ನೇಹಿತರ ಜತೆ ಸೇರಿ ಕ್ರೈಂ ಸಂಬಂಧಿತ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದ್ದಾಳೆ. ಅದರಲ್ಲಿ ಮಹಿಳೆ ನೇಣು ಹಾಕಿಕೊಳ್ಳುವ ದೃಶ್ಯವಿರುತ್ತೆ. ಈಕೆಯೂ ಸ್ನೇಹಿತರ ಜತೆ ನೇಣು ಹಾಕಿಕೊಳ್ಳುವ ಆಟವಾಡುತ್ತಾಳೆ.
ಒಂದು ಬಕೆಟ್ ಇಟ್ಟು ಅದರ ಮೇಲೆ ನಿಂತು ದುಪ್ಪಟದಿಂದ ನೇಣು ಕುಣಿಕೆ ಹಾಕುತ್ತಾಳೆ. ಆಕೆಯ ಸ್ನೇಹಿತರು ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ಆಕೆಗೆ ನೇಣು ಕುಣಿಕೆ ಸಿದ್ಧ ಮಾಡಲು ಸಹಾಯ ಮಾಡುತ್ತಾರೆ. ನಂತರ ಕುತ್ತಿಗೆಗೆ ಕುಣಿಕೆ ಹಾಕಿದಾಗ ಬಕೆಟ್ ಜಾರುತ್ತದೆ, ಆಕೆ ಉಸಿರಾಟಕ್ಕೆ ಪರದಾಡುತ್ತಾಳೆ. ಇದನ್ನು ನೋಡಿದ ಸ್ನೇಹಿತರಿಗೆ ಏನು ಮಾಡಬೇಕೆಂಬುವುದೇ ತಿಳಿಯಲಿಲ್ಲ, ಅಲ್ಲಿಂದ ಓಡಿ ಹೋಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಬಂದು ಆಕೆಯನ್ನು ಕೆಳಗಿಳಿಸಿ ಮಲಗಿಸಿ, ಗೋಣಿ ಚೀಲದಲ್ಲಿ ಆಕೆಯ ದೇಹವನ್ನು ಮುಚ್ಚಿ ಪರಾರಿಯಾಗುತ್ತಾರೆ.
ಸಿಮ್ರಾನ್ ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಸಿಕ್ಕಿದೆ. ಪ್ರಕರಣ ಹಾಪುರ್ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Comments are closed.