ಹೊಸದಿಲ್ಲಿ: ಮೊಬೈಲ್ ಫೋನ್ ಇಂದು ಪ್ರತಿಯೊಬ್ಬನ ಜೀವನದಲ್ಲೂ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್ ಇಲ್ಲದ ಜೀವನ ಅಥವಾ ಜಗತ್ತನ್ನು ಊಹಿಸಲಸಾಧ್ಯ. ಹಾಗಿರಬೇಕೆಂದರೆ ಆಧುನಿಕ ಕಾಲಘಟ್ಟದ ಚಮತ್ಕಾರ ಎಂದೇ ಪರಿಗಣಿಸಲ್ಪಟ್ಟಿರುವ ಮೊಬೈಲ್ ಫೋನ್, ಏಪ್ರಿಲ್ 03ರಂದು 45ರ ವಸಂತಕ್ಕೆ ಕಾಲಿಟ್ಟಿದೆ. ಈ ಸಂಬಂಧ ಕೆಲವು ಮಹತ್ವದ ಅಂಕಿಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಅಮೆರಿಕ ನ್ಯೂಯಾರ್ಕ್‌ನಲ್ಲಿ ಮಾರ್ಟಿನ್ ಕೂಪರ್ ಎಂಬವರು ಮೊದಲ ಸಾರ್ವಜನಿಕ ಮೊಬೈಲ್ ಫೋನ್ ಕರೆಯನ್ನು ಮಾಡಿದರು. ಮೊಟೊರೊಲಾ ಉದ್ಯೋಗಿಯಾಗಿರುವ ಕೂಪರ್, ಮೊಟೊರೊಲಾ ಡೈನಾಟ್ಯಾಕ್ (DynaTAC) ಮೂಲಕ ಮೊದಲ ಕರೆ ಮಾಡಿದ್ದರು.
ಮೊಬೈಲ್ ಫೋನ್ ಅವಿಷ್ಕಾರಗಿಂತಲೂ ಮೊದಲು ಕಾರು ಫೋನ್‌ಗಳನ್ನು ಮುಖ್ಯ ಸಂವಹನ ವಾಹಿನಿಯಾಗಿ ಬಳಸಲ್ಪಟ್ಟಿದ್ದವು. ಕಾರಿನ ರೆಡಿಯೋಫೋನ್ ಸರ್ವಿಸ್ ಜಾಲಕ್ಕೆ ಸಂಪರ್ಕಿತ ಕಾರು ಬ್ಯಾಟರಿಗಳು ಮತ್ತು ದೂರವಾಣಿ ಜಾಲಗಳಿಗೆ ಜೋಡಿಸಲಾದ ಸಿಗ್ನಲ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದಕ್ಕಾಗಿ ಹೈ ಪವರ್ ಟ್ರಾನ್ಸ್‌ಮೀಟರ್ ಹಾಗೂ ಆ್ಯಂಟಿನಾಗಳ ಅವಶ್ಯಕತೆಯಿತ್ತು.
1940ರಿಂದ 1950ರ ದಶಕದಲ್ಲಿ ಸೆಲ್ ಟವರ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ಭಾರತದಲ್ಲೂ ಕಾರ್ ಫೋನ್‌ಗಳ ಬಳಕೆಗೆ ಪುರಾವೆಗಳಿವೆ.
ಮೊಬಲ್ ಫೋನ್ – 10 ಮೈಲುಗಲ್ಲುಗಳು
1. ಮೊಟೊರೊಲಾ ಡೈನಾಟ್ಯಾಕ್ 10 ಇಂಚು ಉದ್ದ ಹಾಗೂ 1.13 ಕೆ.ಜಿ ತೂಕವನ್ನು ಹೊಂದಿತ್ತು. ಇದನ್ನು ಚಾರ್ಜ್ ಮಾಡಿಸಲು ಒಂದು ತಾಸು ತಗಲುತ್ತಿತ್ತು. ಹಾಗೆಯೇ 30 ನಿಮಿಷಗಳ ಸಂಭಾಷಣೆ ಮಾಡಬಹುದಿತ್ತು.
2. 1984ರಲ್ಲಿ ಮೊಟೊರೊಲಾ ಡೈನಾಟ್ಯಾಕ್ ಬಳಕೆಗೆ ಅಮೆರಿಕ ಫೆಡರಲ್ ಕಮ್ಯೂನಿಕೇಷನ್ಸ್ ಕಮಿಷನ್ ಗ್ರೀನ್ ಸಿಗ್ನಲ್ ನೀಡಿದ್ದವು.
3. 771 ಗ್ರಾಂ ತೂಕದ ಮೊದಲ ಸಾರ್ವಜನಿಕ ಡೈನಾಟ್ಯಾಕ್ ಮೊಬೈಲ್ ಫೋನ್ ಸರಿ ಸುಮಾರು 2.6 ಲಕ್ಷ ರೂ.ಗಳಷ್ಟು ಬೆಲೆಬಾಳುತ್ತಿತ್ತು. ಇದರ ಬ್ಯಾಟರಿ ಎಂಟು ತಾಸುಗಳಷ್ಟು ಬಾಳ್ವಿಕೆ ಬರುತ್ತಿತ್ತು.
4. 25 ವರ್ಷಗಳ ಹಿಂದೆ ಐಬಿಎಂ ಮೊತ್ತ ಮೊದಲ ಸ್ಮಾರ್ಟ್‌ಫೋನ್ ಸಿಮೊನ್ ಅಭಿವೃದ್ಧಿಯಲ್ಲಿ ನಿರತವಾಗಿತ್ತು. 1994ರಲ್ಲಿ ಮಾರುಕಟ್ಟೆಗಿಳಿದ ಈ ಸೆಲ್ ಫೋನ್, ಪರ್ಸನಲ್ ಡಿಜಿಟಲ್ ಅಸಿಸ್ಟನ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿತ್ತು. 4.5 ಇಂಚುಗಳ ಮೊನೊಕೋರ್ಮ್ ಎಲ್‌ಸಿಡಿ ಸ್ಕ್ರೀನ್ ಜತೆಗೆ ಫಾಕ್ಸ್‌ಗಳನ್ನು ಕಳಹಿಸಲು ಹಾಗೂ ಪಡೆಯಲು ಸಾಧ್ಯವಾಗುತ್ತಿತ್ತು.
5. 1995 ಜುಲೈ 31ರಲ್ಲಿ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಹಾಗೂ ಟೆಲಿಕಾಂ ಸಚಿವ ಸುಖ್‌ರಾಮ್ ಫೋನ್‌ಗಳ ಮೂಲಕ ಸಂಭಾಷಣೆ ನಡೆಸಿದ್ದರು. ಭಾರತದಲ್ಲಿ ಮೊಬೈಲ್ ಫೋನ್‌ಗಳ ಬಳಕೆಗೆ ಮೊದಲ ದೃಷ್ಟಾಂತ ಇದಾಗಿದೆ.
6. ಆಧುನಿಕ ಕಾಲಘಟ್ಟದಲ್ಲಿ ಕ್ಯಾಮೆರಾ ಇಲ್ಲದ ಸ್ಮಾರ್ಟ್‌ಫೋನ್‌ಗಳನ್ನು ಊಹಿಸಲಸಾಧ್ಯ. ಅಂದ ಹಾಗೆ 2000ನೇ ಇಸವಿಯಲ್ಲಿ ಶಾರ್ಪ್ ಸಂಸ್ಥೆಯು, ಇನ್ ಬಿಲ್ಟ್ ಕ್ಯಾಮೆರಾ ಫೋನ್ J-SH04 ಪರಿಚಯಿಸಿತ್ತು. ಆದರೆ ಇದು ಜಪಾನ್ ಬಿಟ್ಟು ಹೊರ ಬರಲಿಲ್ಲ.
7. ಸಂಯೋಜಿತ ಧ್ವನಿ ಕರೆಯನ್ನು ಮೊದಲು ಪರಿಚಯಿಸಿದ್ದು ಬ್ಲ್ಯಾಕ್‌ಬೆರ್ರಿ. ಮುಂದಿನ ಕೆಲ ವರ್ಷಗಳಲ್ಲಿ ಬ್ಲ್ಯಾಕ್ ಬೆರ್ರಿ ಅಧಿಪತ್ಯ ಮುಂದುವರಿಯಿತು. ಇದಕ್ಕೆ ಪ್ರತಿಸ್ಪರ್ಧಿಯಾಗಿ ಸ್ಟೀವ್ ಜಾಬ್ಸ್ ಆ್ಯಪಲ್ ಕಣಕ್ಕಿಳಿಸಿದರು.
8. 2007ರಲ್ಲಿ ಐಫೋನ್ ಎಂಬ ಅತಿ ಬೇಡಿಕೆಯ ಸ್ಮಾರ್ಟ್‌ಫೋನ್ ಸ್ಟೀವ್ ಜಾಬ್ಸ್ ಹೊರತಂದರು. ಆಕರ್ಷಕ ವಿನ್ಯಾಸ, ಸರಳ ಇಂಟರ್‌ಫೇಸ್ ಹಾಗೂ ಟಚ್ ಸ್ಕ್ರೀನ್ ಮೊಬೈಲ್ ಬಳಕೆದಾರರಿಗೆ ಹೊಸ ಅನುಭವವಾಯಿತು.
9. ಎಚ್‌ಟಿಸಿ ಡ್ರೀಮ್ ಆಂಡ್ರಾಯ್ಡ್ ಓಪರೇಟಿಂಗ್ ಸಿಸ್ಟಂ ನಿಯಂತ್ರಿತ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲಿಯ ವರೆಗೆ ಲಿನಕ್ಸ್ ತಳಹದಿಯ ಓಪರೇಟಿಂಗ್ ಸಿಸ್ಟಂ ಚಾಲ್ತಿಯಲ್ಲಿತ್ತು. ಎಚ್‌ಟಿಸಿ ಡ್ರೀಮ್ ಅಥವಾ ಗೂಗಲ್ ಜಿ1 ಲಿನಕ್ಸ್ ನಿಯಂತ್ರಿತ ಆಂಡ್ರಾಯ್ಡ್ ಓಪೇರೇಟಿಂಗ್ ಸಿಸ್ಟಂ ಹೊಂದಿದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಬಳಿಕ ಇದನ್ನು ಖರೀದಿಸಿದ ಗೂಗಲ್ ಮತ್ತಷ್ಟು ಅಭಿವೃದ್ಧಿಗೊಳಿಸಿತು. ಕಾಪಿ ಪೇಸ್ಟ್, ಫುಲ್ ಡೌನ್ ನೋಟಿಫಿಕೇಷನ್ ಹಾಗೂ ಸ್ಕ್ರೀನ್ ವಿಜೆಟ್‌ಗಳನ್ನು ಹೊಂದಿದ ಮೊದಲ ಸ್ಮಾರ್ಟ್‌ಫೋನ್ ಕೂಡಾ ಇದಾಗಿದೆ. ಹಾಗೆಯೇ ಗೂಗಲ್ ಮ್ಯಾಪ್ ಮತ್ತು ಗೂಗಲ್ ಮ್ಯಾಪ್ಸ್ ಸಹ ಪರಿಚಯವಾಯಿತು.
10. ಸ್ಮಾರ್ಟ್‌ಫೋನ್ ನಿರ್ಮಾಣ ರಂಗದಲ್ಲಿ ಚೀನಾ ಅಧಿಪತ್ಯವನ್ನು ಮುಂದುವರಿಸಿದೆ. ಆದರೆ 2013ರಲ್ಲಿ ಹ್ಯುವೈ ಹಾಗೂ ಝಡ್‌ಟಿಗಳಂತಹ ಬ್ರಾಂಡ್‌ಗಳು ಅಮೆರಿಕಕ್ಕೆ ಕಾಲಿಟ್ಟಿತ್ತು. ಪ್ರಸ್ತುತ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ಕಂಡುಬರುತ್ತಿದೆ.
Comments are closed.