ಹೊಸದಿಲ್ಲಿ: ಉಚಿತ 4ಜಿ ಸೇವೆಯ ಬಳಿಕ 4ಜಿ ಫೋನ್ ಬಿಡುಗಡೆ ಮಾಡುವ ಮೂಲಕ ತಲ್ಲಣ ಎಬ್ಬಿಸಿರುವ ರಿಲಯನ್ಸ್ ಜಿಯೋ ಇದೀಗ ಮಗದೊಂದು ಹೊಸ ಅವಿಷ್ಕಾರದೊಂದಿಗೆ ಮುಂದೆ ಬರುತ್ತಿದೆ.
ಹೌದು ಸಿಮ್ ಕಾರ್ಡ್ ಜತೆ ಲ್ಯಾಪ್‌ಟ್ಯಾಪ್ ಪರಿಚಯಿಸಲು ರಿಲಯನ್ಸ್ ಜಿಯೋ ಮುಂದಾಗುತ್ತಿದೆ. ಈ ಸಂಬಂಧ ಅಮೆರಿಕದ ಚಿಪ್ ದೈತ್ಯ ಕ್ವಾಲ್ಕಂ ಜತೆ ಜಿಯೋ ಮಾತುಕತೆ ನಡೆಸಿದೆ.
ಇವೆಲ್ಲದರ ಮೂಲಕ ವಾರ್ಷಿಕ ಆದಾಯ ವೃದ್ಧಿಯನ್ನು ಜಿಯೋ ಗುರಿಯಿರಿಸಿಕೊಂಡಿದೆ.
ಹೊಸ ಲ್ಯಾಪ್‌ಟಾಪ್ ಮೂಲಕ ವಿಂಡೋಸ್ 10 ಓಪರೇಟಿಂಗ್ ಸಿಸ್ಟಂ ಅಂತನಿರ್ಮಿತ ಸೆಲ್ಯೂಲರ್ ಸಂಪರ್ಕವನ್ನು ನೀಡಲಿದೆ. ರಿಲಯನ್ಸ್ ಜಿಯೋ -ಕ್ವಾಲ್ಕಂ ಜತೆಗಾರಿಕೆಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ನ್ಯಾಪ್‌ಡ್ರಾಗನ್ 835 ನಿಯಂತ್ರಿತ ಅತ್ಯಾಧುನಿಕ ಲ್ಯಾಪ್‌ಟ್ಯಾಪ್ ಹೊರತರುವ ನಿಟ್ಟಿನಲ್ಲಿ ಸ್ಮಾರ್ಟನ್ ಜತೆಗೂ ಚರ್ಚೆ ನಡೆಸಲಾಗುತ್ತಿದೆ.
Comments are closed.